ಚಿತ್ರದ ನಾಯಕ ನಟ ಪ್ರಭಾಸ್ ಉಗ್ರ ಆನೆಯೊಂದನ್ನು ಮಣಿಸುವ ರೀತಿ ಕಂಡುಬರುವ ಈ ಪೋಸ್ಟರ್‌ನಲ್ಲಿ ‘ಬಾಹುಬಲಿ ತಂಡವು ನಿಮಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತದೆ’
ಹೈದ್ರಾಬಾದ್(ಫೆ.24): ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ‘ಬಾಹುಬಲಿ-2’ ಚಿತ್ರತಂಡ ಶುಕ್ರವಾರ ಮಹಾ ಶಿವರಾತ್ರಿಯ ಪ್ರಯುಕ್ತ ಹೊಸ ವಿಶಿಷ್ಟ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದ ನಾಯಕ ನಟ ಪ್ರಭಾಸ್ ಉಗ್ರ ಆನೆಯೊಂದನ್ನು ಮಣಿಸುವ ರೀತಿ ಕಂಡುಬರುವ ಈ ಪೋಸ್ಟರ್ನಲ್ಲಿ ‘ಬಾಹುಬಲಿ ತಂಡವು ನಿಮಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತದೆ’ ಎಂಬ ಸಂದೇಶ ಹೊಂದಿದೆ.

