ಹೈದರಬಾದ್(ಸೆ.23): ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದು ಯಾಕೆ..? ಎನ್ನುವ ಪ್ರಶ್ನೆಗೆ ಉತ್ತರ ಪಡೆಯುವ ಸಲುವಾಗಿ ಬಾಹುಬಲಿ-2 ಚಿತ್ರಕ್ಕಾಗಿ ಕಾಯುತ್ತಿರುವವ ಸಂಖ್ಯೆ ಅತೀಯಾಗಿಯೇ ಇದೆ. ಇದೇ ಸಂದರ್ಭದಲ್ಲಿ ಚಿತ್ರದ ಯಾವ ಅಂಶವು ಹೊರ ಜಗತ್ತಿಗೆ ತಿಳಿಯಂದತೆ ಚಿತ್ರ ತಂಡವು ಎಚ್ಚರಿಕೆ ವಹಿಸಿದೆ. ಆದರೂ ಕೆಲವು ಚಿತ್ರೀಕರಣದ ಚಿತ್ರಗಳು ಲೀಕ್ ಆಗಿದೆ.
ಆಂಧ್ರ ಪ್ರದೇಶದ ರಾಯಲಸೀಮಾದಲ್ಲಿ ನಡೆಯುತ್ತಿರುವ ಚಿತ್ರೀಕರಣದ ಪೋಟೋಗಳು ಲೀಕ್ ಆಗಿದ್ದು, ವೈರಲಾ ಆಗಿದೆ. ಕಲ್ಲು ಕ್ವಾರಿಯೊಂದರಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದನ್ನು ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದೆ.
