ಬಾಹುಬಲಿ 2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಕೇವಲ 10 ದಿನಗಳಲ್ಲಿ ಮೂರೂವರೆ ಕೋಟಿ ವೀಕ್ಷಣೆ ಪಡೆದಿದೆ ಎಂದರೆ, ಈ ಚಿತ್ರ ಹುಟ್ಟಿಸಿರುವ ನಿರೀಕ್ಷೆ, ಹಾಗೂ ಈ ಟ್ರೇಲರ್'ನಲ್ಲಿರುವ ಮ್ಯಾಜಿಕನ್ನು ನಾವು ಗಮನಿಸಬಹುದು.

ಹೈದರಾಬಾದ್(ಮಾ. 26): ಅತೀ ಹೆಚ್ಚು ಕುತೂಹಲ ಮೂಡಿಸಿರುವ, ಅತೀ ಹೆಚ್ಚು ನಿರೀಕ್ಷೆಗಳನ್ನ ಹುಟ್ಟುಹಾಕಿರುವ ಬಾಹುಬಲಿ-2 ಸಿನಿಮಾ ಹಲವು ಕಾರಣಗಳಿಗಾಗಿ ವಿಶ್ವದ ಗಮನ ಸೆಳೆಯುತ್ತಿದೆ. ವಿಶ್ವಾದ್ಯಂತ 6500ಕ್ಕೂ ಹೆಚ್ಚು ಥಿಯೇಟರ್'ಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮ ದೊಡ್ಡ ಸುದ್ದಿಯಾಗಿದೆ. ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಲೈವ್ ಪ್ರಸಾರವಾಗುತ್ತಿದ್ದು, ಭಾರತದ ಮಟ್ಟಿಗೆ ಹೊಸ ಮಟ್ಟಿಗಿನ ದೃಶ್ಯವೈಭವವನ್ನು ತೆರೆದಿಟ್ಟಿದೆ. ನೇರವಾಗಿ ಹೇಳಬೇಕೆಂದರೆ, ಇದು ಲೈವ್ ವರ್ಚುವಲ್ ರಿಯಾಲಿಟಿ ಕಾರ್ಯಕ್ರಮವಾಗಿದೆ. ಇಂಥದ್ದೊಂದು ವರ್ಚುವಲ್ ರಿಯಾಲಿಟಿ ಲೈವ್ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ದೇಶದಲ್ಲಿ ಇದೇ ಮೊದಲ ಬಾರಿ.

ಏನಿದು ವರ್ಚುವಲ್ ರಿಯಾಲಿಟಿ ಶೋ?
ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದಲ್ಲಿ ಪ್ರಸಾರವಾಗುವ ದೃಶ್ಯಗಳನ್ನು ನೋಡಿದಾಗ ವೀಕ್ಷಕರಿಗೆ ಪ್ರತ್ಯಕ್ಷವಾಗಿ ಆ ಕಾರ್ಯಕ್ರಮದ ಸ್ಥಳದಲ್ಲಿ ಕುಳಿತಿರುವಂತೆ ಭಾಸವಾಗುತ್ತದೆ. ವಿವಿಐಪಿಗಳಿಗೆಂದು ಮೀಸಲಾಗಿರುವ ಮುಂದಿನ ಆಸನಗಳ ಸಾಲಿನಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಲಾಗುವ ದೃಶ್ಯಗಳು ಟಿವಿ ವೀಕ್ಷಕರ ಕಣ್ಮುಂದೆ ನೈಜ ದೃಶ್ಯಗಳಂತೆ ಕಾಣುತ್ತವೆ. ಅತ್ಯಾಧುನಿಕ ಪ್ರಯೋಗವೆನಿಸಿರುವ 360 ಡಿಗ್ರಿ ಕ್ಯಾಮೆರಾ ಹಾಗೂ ರಾಡೋನ್ ಲೂಮ್ ಟೆಕ್ನಾಲಜಿಯಲ್ಲಿ ಶೂಟ್ ಮಾಡಲಾಗಿದೆ.

ವಿಆರ್ ಬೂತ್'ಗಳ ಸ್ಥಾಪನೆ:
ಏಪ್ರಿಲ್ 28ರಂದು ಚಿತ್ರ ಬಿಡುಗಡೆಯ ಬಳಿಕ ದೇಶದಲ್ಲಿನ ಸಿನಿಮಾ ಥಿಯೇಟರ್'ಗಳು, ಮಾಲ್'ಗಳು ಹಾಗೂ ಐಟಿ ಪಾರ್ಕ್'ಗಳಲ್ಲಿ 50 ಬೂತ್'ಗಳನ್ನು ಸ್ಥಾಪಿಸಲಾಗುತ್ತದೆ. ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದಲ್ಲಿ ಶೂಟ್ ಮಾಡಲಾದ ಐದಾರು ನಿಮಿಷಗಳ 3D ದೃಶ್ಯಗಳು ಈ ಬೂತ್'ಗಳಲ್ಲಿ ಲಭ್ಯವಿರುತ್ತವೆ.

ಬಾಹುಬಲಿ 2 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಕೇವಲ 10 ದಿನಗಳಲ್ಲಿ ಮೂರೂವರೆ ಕೋಟಿ ವೀಕ್ಷಣೆ ಪಡೆದಿದೆ ಎಂದರೆ, ಈ ಚಿತ್ರ ಹುಟ್ಟಿಸಿರುವ ನಿರೀಕ್ಷೆ, ಹಾಗೂ ಈ ಟ್ರೇಲರ್'ನಲ್ಲಿರುವ ಮ್ಯಾಜಿಕನ್ನು ನಾವು ಗಮನಿಸಬಹುದು. ರಾಯಚೂರಿನವರಾದ ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಸಿನಿಮಾ ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

ಕಾರ್ಯಕ್ರಮ ಲೈವ್ ವೀಕ್ಷಣೆ

ಬಾಹುಬಲಿ-2 ಟ್ರೇಲರ್