ಅವತಾರ್ ಗಳಿಕೆ ಮುರಿದು ಸಾರ್ವಕಾಲಿಕ ದಾಖಲೆಯತ್ತ ಅವೆಂಜರ್ಸ್ ಎಂಡ್‌ಗೇಮ್ | ಅವತಾರ್’ ಸಿನಿಮಾ ಬರೋಬ್ಬರಿ 19260 ಕೋಟಿ ರು. ಹಣ ಗಳಿಕೆ ಮಾಡಿತ್ತು
ಲಾಸ್ ಏಂಜೆಲೀಸ್ (ಜು.22): ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್’ ಸಿನಿಮಾ ಅತಿಹೆಚ್ಚು ಹಣ ಗಳಿಸಿ ಹಾಲಿವುಡ್ ಬಾಕ್ಸ್‌ಆಫೀಸ್‌ನಲ್ಲಿ ಇತಿಹಾಸ ಬರೆದಿತ್ತು.
ಆದರೆ, ಇದೀಗ ಆ್ಯಂಥೋನಿ ಮತ್ತು ಜೋಯ್ ರುಸ್ಸೋ ನಿರ್ದೇಶನದ ‘ಅವೆಂಜರ್ಸ್: ಎಂಡ್‌ಗೇಮ್’ ಸಿನಿಮಾ ಭಾರೀ ಯಶಸ್ಸು ಕಂಡಿದ್ದು, ಅವತಾರ್ ಸಿನಿಮಾಕ್ಕಿಂತಲೂ ಅಧಿಕ ಹಣ ಗಳಿಸಿ ಸಾರ್ವಕಾಲಿಕ ದಾಖಲೆ ಸೃಷ್ಟಿಸುವತ್ತ ಸಾಗಿದೆ. 2009ರಲ್ಲಿ ತೆರೆಕಂಡಿದ್ದ ‘ಅವತಾರ್’ ಸಿನಿಮಾ ಬರೋಬ್ಬರಿ 19260 ಕೋಟಿ ರು. ಹಣಗಳಿಕೆ ಮಾಡಿತ್ತು.
ಈ ಮೊತ್ತಕ್ಕಿಂತ ಕೇವಲ 3.50 ಕೋಟಿ ರು. ಹಿಂದೆ ಇರುವ ‘ಅವೆಂಜರ್ಸ್: ಎಂಡ್‌ಗೇಮ್‘ ಸಿನಿಮಾ ಇನ್ನು ಕೇವಲ ಒಂದೆರಡು ದಿನಗಳಲ್ಲಿ ಅವತಾರ್ ದಾಖಲೆ ಮುರಿಯುವ ಮೂಲಕ, ಅತಿ ಹೆಚ್ಚು ಸಂಪಾದನೆ ಮಾಡಿದ ವಿಶ್ವದ ನಂ.1 ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಜ್ಜಾಗಿದೆ.
