ವಿದೇಶದಲ್ಲಿ ಬಿಗ್ ಬಜೆಟ್ 'ಕರ್ನಾಟಕ ಅಳಿಯ' ಚಿತ್ರೀಕರಣ ಮಾಡುತ್ತಿರುವ ನಟ ಪ್ರಥಮ್!
ಮೊದಲ ಬಾರಿ ವಾಮಾಚಾರ ಕಾನ್ಸೆಪ್ಟ್ ಹಿಡಿದು ಸಿನಿಮಾ ಮಾಡುತ್ತಿರುವ ಒಳ್ಳೆ ಹುಡುಗ. ವಿದೇಶದಲ್ಲಿ ಕನ್ನಡಿಗರ ಹವಾ

ಕನ್ನಡ ಚಿತ್ರರಂಗದ ಏಕೈಕಾ ಒಳ್ಳೆ ಹುಡುಗ ಪ್ರಥಮ್ ಥೈಲ್ಯಾಂಡ್‌ನಲ್ಲಿ ಕರ್ನಾಟಕದ ಅಳಿಯ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಇಡೀ ತಂಡ ಭಾರತದಿಂದ ಥೈಲ್ಯಾಂಡ್‌ಗೆ ಪ್ರಯಾಣ ಮಾಡಿದೆ.
ಕರ್ನಾಟಕದಲ್ಲಿ ಸಾಂಗ್ ಮತ್ತು ಫೈಟಿಂಗ್ ಚಿತ್ರೀಕರಣ ನಡೆಯಲಿದೆ. ಸಿನಿಮಾ ವಾಮಚಾರದ ಮೇಲೆ ಇರುವ ಕಾರಣ ಎರಡನೇ ಭಾಗದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಮತ್ತು ರೇಖಾ ಕಾಣಿಸಿಕೊಳ್ಳಲಿದ್ದಾರೆ.
ಕರ್ನಾಟಕದ ಅಳಿಯ ಸಿನಿಮಾ ಥೈಲ್ಯಾಂಡ್, ಬ್ಯಾಂಕಾಕ್ ಮತ್ತು ಜರ್ಮನಿಯಲ್ಲಿ ಸಂಪೂರ್ಣ ಚಿತ್ರೀಕರಣ ನಡೆಯಲಿದ್ದು. ಪ್ರಥಮ್ ಸಖತ್ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.
ನಟ ಭಯಂಕರ ಸಿನಿಮಾ ಮೇಕಿಂಗ್ ಅದ್ಭುತವಾಗಿದೆ ಎಂದು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ ಹೀಗಾಗಿ ಕರ್ನಾಟಕದ ಅಳಿಯ ಸಿನಿಮಾವನ್ನು ಬಿಗ್ ಬಜೆಟ್ ಹಾಕಿ ಮಾಡುತ್ತಿದ್ದಾರೆ.
ವಾಮಾಚಾರ ಕೂರಿತು ಮಾಡಲಾಗುತ್ತಿರುವ ಈ ಸಿನಿಮಾದಲ್ಲಿ ದೊಡ್ಡ ಕಲಾವಿದರ ದಂಡಿದೆ. ಪ್ರಪಥಮಾ ಬಾರಿಗೆ ರೇಖಾ ಅವರು ವಾಮಾಚಾರ ಸಿನಿಮಾ ಒಪ್ಪಿಕೊಂಡಿರುವುದು.
ನಾಲ್ಕು ದಿನಗಳಲ್ಲಿ ಕಾಲ ಬ್ಯಾಂಕಾಕ್‌ನ ಸುಂದರ ತಾಣಗಳನ್ನು ಹುಡುಕಿ ಚಿತ್ರೀಕರಣ ಆರಂಭಿಸಿದ್ದಾರೆ. ಆನಂತರ ಕರ್ನಾಟಕಕ್ಕೆ ಬಂದು ನಟ ಭಯಂಕರ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.