ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಕ್ಕೆ ಇದೀಗ ಸ್ವತಃ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನೀಡಿರುವ ರಿಯಾಕ್ಷನ್ ಏನು.?

ಬೆಂಗಳೂರು : ಶ್ರುತಿ ಹರಿಹರನ್ ಹಿರಿಯ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಕಿರುಕುಳ ಆರೋಪ ಮಾಡಿದ್ದಕ್ಕೆ ಇದೀಗ ಸ್ವತಃ ಅರ್ಜುನ್ ಸರ್ಜಾ ಅವರೇ ಪ್ರತಿಕ್ರಿಯಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಶ್ರುತಿ ಹರಿಹರನ್ ಬಗ್ಗೆ ತಾವು ತುಂಬಾ ಗೌರವವನ್ನು ಇರಿಸಿಕೊಂಡಿದ್ದೆ. ಆಕೆ ಮಾಡಿರುವ ಆರೋಪದಿಂದ ಮನಸ್ಸಿಗೆ ತುಂಬಾ ನೋವುಂಟಾಗಿದೆ. ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸರ್ಜಾ ಹೇಳಿದ್ದಾರೆ. 

"

ನನ್ನ ವಿರುದ್ಧ ಮಾಡಿರುವ ಆರೋಪ ನನಗೆ ನಂಬಲಾಗುತ್ತಿಲ್ಲ. ನಾನು ಶ್ರುತಿ ಚನ್ನಾಗಿ ನಟಿಸುತ್ತಾಳೆ ಎಂದಷ್ಟೇ ಹೇಳಿದ್ದೆ. ಅದನ್ನು ಬಿಟ್ಟು ಅವಳ ಬಗ್ಗೆ ಯಾವತ್ತೂ ಏನೂ ಮಾತನಾಡಲು ಹೋಗಿಲ್ಲ. ಇಂತಹ ಆರೋಪದಿಂದ ಅವರ ಬಗ್ಗೆ ಇದ್ದ ಗೌರವ ಹೋಗಿದೆ. ಪ್ರಚಾರಕ್ಕಾಗಿ ಈರೀತಿ ಮಾಡಿರುವು ನಾಚಿಕೆ ಸಂಗತಿ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ. ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡಿದ್ದರೆ ನಾಚಿಕೆ ಆಗಲ್ವಾ ಎಂದು ತಿರುಗೇಟು ನೀಡಿದ್ದಾರೆ.