ಮುಂಬೈ(ಆ. 12)  ಬಾಲಿವುಡ್ ನಟ ಟೈಗರ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್, ತಮ್ಮ ದೈನಂದಿನ ಚಟುವಟಿಕೆಗಳನ್ನು ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ಜತೆಗೆ ಅಭಿಮಾನಿಗಳೊಂದಿಗೆ ಇಂಟಾರಾಕ್ಟ್ ಸಹ ಮಾಡುತ್ತಾರೆ.

ಇಸ್ಟಾಗ್ರ್ಯಾಮ್ ನಲ್ಲಿ ಮೊನ್ನೆ ಟೈಗರ್ ಶ್ರಾಫ್ ಅಭಿಮಾನಿಗಳ ಜತೆ ಸಂವಾದಕ್ಕೆ ಮುಂದಾದಾಗ ಕೇಳಿ ಬಂದ ಪ್ರಶ್ನೆಯೊಂದು  ಅವರ ಕೋಪಕ್ಕೆ ಕಾರಣವಾಗಿದೆ. ನೀವು ಏನು ಬೇಕಾದರೂ ಕೇಳಬಹುದು ಎಂದಾಗ ಅಭಿಮಾನಿಗಳಿಂದ ಪ್ರಶ್ನೆಗಳು ಬಂದಿವೆ. ಸಾಕಷ್ಟು ಪ್ರಶ್ನೆಗಳಿಗೆ ಡಿಸೆಂಟಾಗೆ ಉತ್ತರಿಸಿದ ನಟ ಒಂದು ಈ ಪ್ರಶ್ನೆ ಎದುರಾದಾಗ ಕೆಂಡಾಮಂಡಲವಾದರು.

ಆಡಿಕೊಂಡವರಿಗೆ ಏಟು.. ದಿಶಾ ಪಟಾನಿಗೆ ಕುಪ್ಪಸ ಹಾಕಿಸಿದ ನೆಟ್ಟಿಗರು!

ನೀವು ಇನ್ನು ವರ್ಜಿನ್ನಾ? ಎಂಬ ಪ್ರಶ್ನೆಯೊಂದು ಬಂದಿದೆ. ಇದಕ್ಕೆ ಖಾರವಾಗಿಯೇ ಉತ್ತರಿಸಿರುವ ಟೈಗರ್, ನಾಚಿಕೆಯಾಗಬೇಕು ನಿಮಗೆ, ನನ್ನ ತಂದೆ-ತಾಯಿ ಸಹ ಅಕೌಂಟ್ ಫಾಲೋ ಮಾಡುತ್ತಿದ್ದಾರೆ ಎಂದಿದ್ದಾರೆ.

ನನ್ನ-ನಿನ್ನ ನಡುವೆ ಏನಿಲ್ಲ.. ದಿಶಾ ಪಟಾನಿ ಕೈ ಕೊಟ್ಟಳಾ?

ನಿಮಗೆ ಇರುವ ಗರ್ಲ್ ಫ್ರೆಂಡ್ ಗಳೆಷ್ಟು? ಎಂಬ ಪ್ರಶ್ನೆಗೆ ಇಷ್ಟಕ್ಕೆ ಸಾಕು ಮಾಡಿ ಎಂದು ಉತ್ತರಿಸಿದ್ದಾರೆ. ನೀವು ನಟಿ ದಿಶಾ ಪಟಾನಿ ಅವರೊಂದಿಗೆ ಡೇಟಿಂಗ್ ನಲ್ಲಿ ಇದ್ದೀರಾ? ಎಂಬುದಕ್ಕೆ ಆ ಯೋಗ್ಯತೆ ನನಗಿಲ್ಲ ಬಿಡಿ ಎಂಬ ಪ್ರತಿಕ್ರಿಯೆ ಟೈಗರ್ ದು. ಟೈಗರ್ ಶ್ರಾಫ್ ಮತ್ತು ಸುಂದರಿ ದಿಶಾ ಪಟಾನಿ ಹಲವಾರು ವರ್ಷಗಳಿಂದ ಡೇಟಿಂಗ್ ನಲ್ಲಿ ಇದ್ದಾರೆ. ಒಬ್ಬರೊಬ್ಬರನ್ನು ಹಚ್ಚಿಕೊಂಡಿದ್ದಾರೆ ಎಂದು ವರದಿಗಳು ಬರುತ್ತಲೇ ಇವೆ.