ಇತ್ತೀಚೆಗಷ್ಟೇ ಬಿಡುಗಡೆಯಾದ ಚೌಕ ಸಿನಿಮಾದ 'ಅಪ್ಪ ಐ ಲವ್ ಯು ಪ' ಎನ್ನುವ ಹಾಡು ಬಹಳಷ್ಟು ಫೇಮಸ್ ಆಗಿತ್ತು. ಇದಕ್ಕೆ ಕಾರಣವಾಗಿದ್ದು ಈ ಹಾಡಿನ ಸಾಹಿತ್ಯ. ತಂದೆಯ ಪ್ರೀತಿಯನ್ನು ಸಾರಿ ಹೇಳುವ ಈ ಹಾಡು ಪ್ರತಿಯೊಬ್ಬರಿಗೂ ತಮ್ಮ ತಂದೆಯ ಪ್ರೀತಿಯನ್ನು ನೆನೆಯುವಂತೆ ಮಾಡಿತ್ತು. ಕೇಳಿದವರೆಲ್ಲಾ ತಂದೆಯನ್ನು ನೆನೆದು ಆನಂದಬಾಷ್ಪ ಸುರಿಸಿ, ಭಾವುಕರಾಗಿದ್ದರು.

ಕೇವಲ ಆಡಿಯೋದಿಂದಲೇ ಜನರ ಹೃನ್ಮನ ಗೆದ್ದಿದ್ದ ಈ ಹಾಡಿನ ವಿಡಿಯೋ ಆವೃತ್ತಿ ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ತಂದೆ ಹಾಗೂ ಮಗಳ ನಡುವಿನ ಅದ್ಭುತ ಪ್ರೀತಿಯನ್ನು ಇದು ಕಣ್ಕಟ್ಟುವಂತೆ ತೋರಿಸುತ್ತದೆ. ತಂದೆ ಮಗಳಿಗಾಗಿ ಪಡುವ ಶ್ರಮ ಹಾಗೂ ಮಗಳಿಗೆ ತಂದೆಯ ಮೇಲಿರುವ ವಿಶ್ವಾಸವನ್ನು ಇದು ಮನಸ್ಸು ನಾಡುವಂತೆ ತೋರಿಸಿದೆ. ಸಾಹಿತ್ಯ/ ಆಡಿಯೋಗೆ ತಕ್ಕಂತೆ ವಿಡಿಯೋ ಕೂಡಾ ಅದ್ಭುತವಾಗಿ ಮೂಡಿ ಬಂದಿದೆ.