ಬಾಹುಬಲಿ ಸಿನಿಮಾಗಳ ಮೂಲಕ ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ದಕ್ಷಿಣದ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಲೋಕಕ್ಕೆ ವಿದಾಯ ಹೇಲ್ತಿದ್ದಾರಾ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಪೂರಕವಾದಂತಿದೆ ಇತ್ತೀಚಿನ ಕೆಲವು ಬೆಳವಣಿಗೆಗಳು.

ಬ್ಲಾಕ್‌ಬಸ್ಟರ್ ಆದ ಬಾಹುಬಲಿ 2 ಸಿನಿಮಾದ ನಂತರ ಅನುಷ್ಕಾ ಪ್ರಾಜೆಕ್ಟ್ ಸೈನ್ ಮಾಡುವುದನ್ನು ತುಂಬಾ ಕಡಿಮೆ ಮಾಡಿದ್ದಾರೆ. ಬಾಹುಬಲಿ ಸಿನಿಮಾ ನಂತರ ಅವರು ಮಾಡಿದ್ದು, ಭಾಗಮತಿ ಹಾಗೂ ನಿಶ್ಯಬ್ದ ಸಿನಿಮಾ ಮಾತ್ರ. ಸೈರಾಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೂ, ಇದೊಂದು ಚಿಕ್ಕ ಪಾತ್ರವಾಗಿದ್ದು, ಮೆಗಾ ಸ್ಟಾರ್ ಚಿರಂಜೀವಿಗೆ ನೋ ಹೇಳಲಾಗದೆ ಇದರಲ್ಲೂ ನಟಿಸಿದ್ದರು.

ಸಿನಿಮಾಗೂ ಮೊದಲು ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ರಾ ಅನುಷ್ಕಾ ಶೆಟ್ಟಿ?

ಭಾಗಮತಿ ಸಿನಿಮಾ ಟ್ರೈಲರ್ ಭಾರೀ ಕುತೂಹಲ ಮೂಡಿಸಿದರೂ, ಸಿನಿಮಾ ಮಾತ್ರ ಅಂತಹ ಹೆಸರೇನೂ ಮಾಡಲಿಲ್ಲ. ಇನ್ನು ನಿಶ್ಯಬ್ದ ಸಿನಿಮಾ ರಿಲೀಸ್ ಬಗ್ಗೆಯೇ ಗೊಂದಲವಿದೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡುವುದಾ ಅಥವಾ ಒಟಿಟಿ ಮೂಲಕ ಬಿಡುಗಡೆ ಮಾಡುವುದಾ ಎಂಬ ಬಗ್ಗೆ ಸಿನಿಮಾ ತಂಡ ಇನ್ನೂ ಷ್ಪಷ್ಟ ನಿಲುವಿಗೆ ಬಂದಿಲ್ಲ.

ಹಾಗಾದ್ರೆ ಅನುಷ್ಕಾ ಅವರ ಮುಂದಿನ ಸಿನಿಮಾ ಯಾವುದು..? ಗೌತಮ್ ಮೆನೋನ್ ಅವರ ಬಹುಭಾಷಾ ಪ್ರಾಜೆಕ್ಟ್ ಒಂದಕ್ಕೆ ಅನುಷ್ಕಾ ಸಹಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ತಮಿಳು ನಿರ್ದೇಶಕ ಸದ್ಯ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು ಈ ಸಿನಿಮಾ ಸದ್ಯದಲ್ಲಿ ಸೆಟ್ಟೇರುವ ಯಾವ ಸೂಚನೆಯೂ ಇಲ್ಲ.

ಪ್ರಭಾಸ್‌ ಜೊತೆಯ ರಿಲೇಷನ್‌ಶಿಪ್‌ ಬಗ್ಗೆ ಬಾಯಿ ಬಿಟ್ಟ ಅನುಷ್ಕಾ ಶೆಟ್ಟಿ!

ಇನ್ನು ಮುಂದೆ ಅನುಷ್ಕಾ ತಮಗೆ ಪ್ರಾಮುಖ್ಯತೆ ಸಿಗುವಂತಹ, ಹಿರೋಯಿನ್ ಓರಿಯೆಂಟೆಡ್ ಸಿನಿಮಾಗಳಲ್ಲಿ ಮಾತ್ರ ನಟಿಸಲಿದ್ದಾರೆ ಎಂಬ ಮಾತುಗಳೂ ಕೇಳುಬರುತ್ತಿವೆ. ಹಾಗೆಯೇ ತಮಗೆ ತಿಳಿದಿರುವ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಮಾತ್ರ ಕೆಲಸ ಮಾಡುವ ನಿರ್ಧಾರವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ.