ಬೆಂಗಳೂರು[ಜು. 31] ಕನ್ನಡತಿ, ಮಂಗಳೂರಿನ ಚೆಲುವೆ ಅನುಷ್ಕಾ ಶೆಟ್ಟಿ ಪರಭಾಷೆಗಳಲ್ಲಿ ಟಾಫ್ ಹಿರೋಯಿನ್ ಪಟ್ಟ ಅಲಂಕರಿಸಿದವರು.  ತೆಲುಗು, ತಮಿಳು ಚಿತ್ರರಂಗದ ಟಾಪ್ ಹೀರೋಯಿನ್‌ ಆಗಿರುವ ಅನುಷ್ಕಾ ಕನ್ನಡದಲ್ಲಿಯೂ ಸೂಕ್ತ ಚಿತ್ರ ಸಿಕ್ಕರೆ ಅಭಿನಯಿಸುತ್ತೆನೆ ಎಂದು ಹೇಳಿಕೊಂಡು ಬಂದಿದ್ದಾರೆ.  ನೆನಪಿರಲಿ ಪ್ರೇಮ್ ಅವರ ಚಿತ್ರವೊಂದನ್ನು ಬೆಂಗಳೂರಿನಲ್ಲಿ ವೀಕ್ಷಿಸಿ ಕನ್ನಡದಲ್ಲಿಯೇ ಮಾತನಾಡಿದ್ದರು.

ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲು ಮಾಡಿರುವ ಟ್ವೀಟ್ ನೋಡಿದ ಟ್ವೀಟರಿಗರು  ಅನುಷ್ಕಾರನ್ನು ಕೊಂಡಾಡಿದ್ದರೆ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಮುಗಿಬಿದ್ದಿದ್ದಾರೆ.

ಸ್ಟಾರ್ ನಟಿಯಾಗಿದ್ದರೂ ಸಹ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಕನ್ನಡದಲ್ಲೇ ಶುಭಾಶಯ ಹೇಳಿ ಟ್ವೀಟ್ ಮಾಡಿದ್ದು ಇದು ಕೋಟ್ಯಂತರ ಕನ್ನಡಿಗರು ಕೊಂಡಾಡಿದ್ದಾರೆ. ಕನ್ನಡದ ಚಿತ್ರ ಕಿರಿಕ್ ಪಾರ್ಟಿ ಮೂಲಕ ತೆರೆಗೆ  ಬಂದ ರಶ್ಮಿಕಾ ಇದೀಗ ತೆಲಗು, ತಮಿಳಿನಲ್ಲಿ ಬ್ಯೂಸಿ ನಾಯಕಿ. ಆದರೆ ಸಂದರ್ಶನವೊಂದರಲ್ಲಿ ಕನ್ನಡ ನನಗೆ ಕಷ್ಟ ಎಂದು ಹೇಳಿದ್ದಕ್ಕೆ ಸಾಕಷ್ಟು ಟೀಕೆ ಅನುಭವಿಸಿದ್ದರು.

ರಶ್ಮಿಕಾಗಿಂತ ಸೂಪರ್ ಕನ್ನಡ ಮಾತನಾಡಿದ ಶ್ರೀಶಾಂತ್! ವಿಡಿಯೋ ವೈರಲ್

ಅನುಷ್ಕಾ ನಿಮಗೆ ತುಂಬು ಹೃದಯದ ಗೌರವ ಸಲ್ಲಿಸುತ್ತೇವೆ. ಪರಭಾಷೆಯಲ್ಲಿ ಖ್ಯಾತಿ ಗಳಿಸಿದ ಕೆಲವರು ನನಗೆ ಕನ್ನಡ ಬರಲ್ಲ. ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳುವವರ ನಡುವೆ ನೀವು ಅತಿ ಅಪರೂಪದ ಕೆಲಸ ಮಾಡಿದ್ದೀರಿ, ಮಾದರಿಯಾಗಿ ನಿಂತಿದ್ದೀರಿ ಎಂದು ಅಭಿಮಾನಿಗಳು ಕೊಂಡಾಡಿದ್ದಾರೆ. ಸೈರಾ ನರಸಿಂಹ ರೆಡ್ಡಿ, ಸೈಲೆನ್ಸ್, ನಿಶ್ಯಬ್ದಂ ಎಂಬ ಚಿತ್ರಗಳಲ್ಲಿ ಅನುಷ್ಕಾ ಶೆಟ್ಟಿ ಬಿಜಿಯಾಗಿದ್ದಾರೆ.