ಅನುಷ್ಕಾ ಶೆಟ್ಟಿ ತೆರೆ ಮೇಲೆ ಹೇಗೆ ಸಖತ್ ಸ್ವಿಟೋ ಹಾಗೆ ತೆರೆ ಹಿಂದೆಯೂ ಅಷ್ಟೆ ಕ್ಯೂಟ್ ಆಂಡ್ ಸ್ವಿಟ್ . ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರೋ ಅನುಷ್ಕಾ ಬರ್ತ್ ಡೇ ದಿನ ಯಾರೂ ನಿರೀಕ್ಷಿಸದ ಅಚ್ಚರಿಯೊಂದನ್ನ ನೀಡಿದ್ದಾರೆ. ಅನುಷ್ಕಾ ಮಾಡಿದ ಕೆಲಸ ಕೇಳಿ ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ.
ಬೆಂಗಳೂರು (ನ.08): ಅನುಷ್ಕಾ ಶೆಟ್ಟಿ ತೆರೆ ಮೇಲೆ ಹೇಗೆ ಸಖತ್ ಸ್ವಿಟೋ ಹಾಗೆ ತೆರೆ ಹಿಂದೆಯೂ ಅಷ್ಟೆ ಕ್ಯೂಟ್ ಆಂಡ್ ಸ್ವಿಟ್ . ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರೋ ಅನುಷ್ಕಾ ಬರ್ತ್ ಡೇ ದಿನ ಯಾರೂ ನಿರೀಕ್ಷಿಸದ ಅಚ್ಚರಿಯೊಂದನ್ನ ನೀಡಿದ್ದಾರೆ. ಅನುಷ್ಕಾ ಮಾಡಿದ ಕೆಲಸ ಕೇಳಿ ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ. ಇಷ್ಟಕ್ಕೂ ಅನುಷ್ಕಾ ಬರ್ತ್ ಡೆ ದಿನ ಮಾಡಿದ್ದಾದ್ರೂ ಏನು ಗೊತ್ತಾ? ಅನುಷ್ಕಾ ಅದೆಷ್ಟು ಸಹೃದಯಿ, ಅದೆಷ್ಟು ಹೃದಯವಂತೆ ಅನ್ನೋದು ಇಲ್ಲಿ ಗೊತ್ತಾಗಲಿದೆ. ಅನುಷ್ಕಾ ಶೆಟ್ಟಿ ಬಳಿ ಬಹಳ ವರ್ಷಗಳಿಂದ ಕೆಲಸ ಮಾಡಿರುವ ತನ್ನ ಕಾರು ಚಾಲಕನಿಗೆ ಹೊಸ ಕಾರೊಂದನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾಳೆ. ಬರ್ತ್ ಡೆ ಅನುಷ್ಕಾರದ್ದು ಗಿಫ್ಟ್ ಅವರ ಡ್ರೈವರ್ಗೆ.
ಅನುಷ್ಕಾ ಕೊಡಿಸಿರೊ ಕಾರಿನ ಬೆಲೆ 12 ಲಕ್ಷ ರೂ. ಅನುಷ್ಕಾ 140 ಕೊಟಿ ಆಸ್ತಿ ಒಡತಿ. ಜೊತೆಗೆ ಬಾಹುಬಲಿ ಸಕ್ಸಸ್ ನಂತರ ಅನುಷ್ಕಾ ಒಂದೇ ಸಿನಿಮಾಗೆ 3 ಕೋಟಿ ಸಂಭಾವನೆ ಪಡಿಯುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಬಳಿಯೂ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವೆ. ಅವುಗಳಲ್ಲಿ ಆಡಿ ಎ6, ಬಿ.ಎಂ.ಡಬ್ಲ್ಯೂ 6, ಆಡಿ ಕ್ಯೂ 5 ಮೊದಲಾದ ಕಾರುಗಳಿವೆ. ಇದೆಲ್ಲ ಏನೆ ಇದ್ದರೂ ಸದಾ ಅನುಷ್ಕಾ ಬಗ್ಗೆ ಕಾಳಜಿ ವಹಿಸೋ ಹಿರಿಯ ಜೀವಕ್ಕೆ ಅನುಷ್ಕಾ ತನ್ನ ಒಂದು ಪುಟ್ಟ ಕಾಣಿಕೆ ಎಂದು ಹೇಳಿ ಎಲ್ಲರ ಹೃದಯ ಗೆದ್ದಿದ್ದಾರೆ.
