ಜೀರೋ ಸಿನಿಮಾ ರಿಲೀಸಾಗಿದೆ. ಹೇಳಿಕೊಳ್ಳುವ ಮಟ್ಟಿಗೆ ಸದ್ದು ಮಾಡುತ್ತಿಲ್ಲ ಜೀರೋ. ಈ ಚಿತ್ರದ ಬಗ್ಗೆ ಅನುಷ್ಕಾ ಶರ್ಮಾ ಎಮೋಶನಲ್ ಲೆಟರ್ ಬರೆದಿದ್ದಾರೆ. 

ಬೆಂಗಳೂರು (ಡಿ.21): ಶಾರೂಕ್ ಖಾನ್- ಅನುಷ್ಕಾ ಶರ್ಮಾ ಜೋಡಿಯ ಜೀರೋ ಬಿಡುಗಡೆಯಾಗಿದೆ. ಅನುಷ್ಕಾ ಶರ್ಮಾ ಶಾರೂಕ್ ಬಗ್ಗೆ ಎಮೋಶನಲ್ ಲೆಟರ್ ಬರೆದಿದ್ದಾರೆ. ದಶಕಗಳ ಹಿಂದೆ ರಬ್ ನೆ ಬನಾದಿ ಜೋಡಿ ಮೂಲಕ ಬಾಲಿವುಡ್ ಗೆ ಕಾಲಿಟ್ಟವರು ಅನುಷ್ಕಾ ಶರ್ಮಾ. ಬಾಲಿವುಡ್ ಬಾದ್ ಶಾ ಇದು ನಾಲ್ಕನೇ ಸಿನಿಮಾ. 

ರಬ್ ನೇ ಬನಾದಿಜೋಡಿ, ಜಬ್ ತಕ್ ಹೆ ಜಾನ್, ಜಬ್ ಹ್ಯಾರಿ ಮೆಟ್ ಸೆಜಲ್ ಹಾಗೂ ಜೀರೋ ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. 

View post on Instagram

’ ಶಾರೂಕ್ ಜಿ, ನಿಮ್ಮಂತ ಪ್ರತಿಭಾನ್ವಿತ ನಟರ ಜೊತೆ ಅಭಿನಯಿಸುವುದು ನನ್ನ ಅದೃಷ್ಟ. ನಿಮ್ಮಜೊತೆ ಕೆಲಸ ಮಾಡಿದ್ದೇನೆ. ನಿಮ್ಮ ಜೊತೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದೇನೆ. ಈ ಸಿನಿಮಾ ಜರ್ನಿ ಅದ್ಭುತವಾಗಿತ್ತು. ನಿಮ್ಮಿಂದ ಕಲಿಯುತ್ತಾ ಕಲಿಯುತ್ತಾ ಬೆಳೆದಿದ್ದೇನೆ. ನಿಮ್ಮ ಸಪೋರ್ಟ್, ಉತ್ಸಾಹ, ಕಲಿಸುವ ಶ್ರದ್ಧೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾವಿಬ್ಬರೂ ನಾಲ್ಕನೇ ಸಿನಿಮಾ ಬಿಡುಗಡೆ ಮಾಡಿದ್ದೇವೆ. ಬಹಳ ಖುಷಿಯಾಗುತ್ತಿದೆ ಎಂದು ಅನುಷ್ಕಾ ಎಮೋಶನಲ್ ಆಗಿ ಬರೆದಿದ್ದಾರೆ. 

ಇದಕ್ಕೆ ಶಾರೂಕ್ ಪ್ರತಿಕ್ರಿಯಿಸಿದ್ದು, ನನ್ನ ಪ್ರೀತಿಯ ಸ್ನೇಹಿತೆ, ನಿನ್ನ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ಕೊಟ್ಟಿದೆ. ನೀನು ನನ್ನನ್ನು ಉತ್ತಮ ನಟನನ್ನಾಗಿ ಮಾಡಿದ್ದೀಯಾ ಎಂದು ಹೇಳಿದ್ದಾರೆ. 

Scroll to load tweet…