ಟೀಂ ಇಂಡಿಯಾ ನಾಯಕ ವಿರಾಟ್ ಹಾಗೂ ಬಾಲಿವುಡ್ ಎಲಿಗೆಂಟ್ ನಟಿ ಅನುಷ್ಕಾ ಶರ್ಮಾ ಮುಂಬೈನ ವರ್ಲಿಯಲ್ಲಿ ಅದ್ಭುತವಾದ ಮನೆಯೊಂದರಲ್ಲಿ ವಾಸವಿದ್ದಾರೆ. ಅದಕ್ಕೆ ತಿಂಗಳ ಬಾಡಿಗೆ ಕೇಳಿದರೆ ಹೌಹಾರುತ್ತೀರಿ. ಬರೋಬ್ಬರಿ 15 ಲಕ್ಷ ರೂ. ಅಂತೆ!

ಕ್ರೀಡಾಂಗಣದಲ್ಲಿ ಕೊಹ್ಲಿಗೆ ಕಿಸ್, ಅನುಷ್ಕಾ ದಿಲ್ ಖುಷ್!

 

2017ರಲ್ಲಿ ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಸಪ್ತಪದಿ ತುಳಿದ ನಂತರ ಫೆವರೆಟ್ ಅ್ಯಂಡ್ ಲಕ್ಕಿ ಮನೆಯಾಗಿರುವ 40ನೇ ಮಹಡಿಯ ರಹೇಜಾ ಲೆಜೆಂಡ್ಸ್ ಅಪಾರ್ಟ್‌ಮೆಂಟ್‌ಗೆ ತೆರಳಿದರು. ಈ ಮನೆಯಲ್ಲಿ ಮೋಸ್ಟ್ ಮೆಮೋರೇಬಲ್ ಮುಮೆಂಟ್ಸ್ ಇವೆ ಎಂಬ ಕಾರಣಕ್ಕೆ ಬಾಡಿಗೆ ಜಾಸ್ತಿಯಾದ್ರೂ ಅಲ್ಲಿಯೇ ಇರಲು ನಿರ್ಧರಿಸಿದ್ದಾರಂತೆ. ಸದ್ಯಕ್ಕೆ ತಿಂಗಳ ಬಾಡಿಗೆ 15 ಲಕ್ಷ ರೂ. ಆಗಿದ್ದು, ಡೆಪಾಸಿಟ್ ಆಗಿ 1.50 ಕೋಟಿ ರೂ. ಕೊಟ್ಟಿದ್ದಾರಂತೆ.

ವಿರಾಟ್-ಅನುಷ್ಕಾ ಮೊದಲ ಭೇಟಿ; 2013ರ ಸವಿ ನೆನಪು ಬಿಚ್ಚಿಟ್ಟ ನಾಯಕ!

2018ರಲ್ಲಿ ಬಿಡುಗಡೆಯಾದ ಝೀರೋ ಚಿತ್ರದ ನಂತರ ಅನುಷ್ಕಾ ಯಾವ ಚಿತ್ರಕ್ಕೂ ಸಹಿ ಹಾಕದೇ ಪತಿಯೊಂದಿಗೆ ಅಲ್ಲಿ ಇಲ್ಲಿ ಸುತ್ತುತ್ತಾ, ಜಾಲಿಯಾಗಿ ಜೀವನವನ್ನು ಕಳೆಯುತ್ತಿದ್ದಾರೆ.