ಅನುಷ್ಕಾ ಶರ್ಮಾ, ಶಾರೂಕ್ ಖಾನ್ ಜೋಡಿಯ ’ರಬ್ ನೇ ಬನಾದಿ ಜೋಡಿ’ ಮೋಡಿ ಮಾಡಿತ್ತು ! ಶಾರೂಕ್ ಎಂದರೆ ಅನುಷ್ಕಾ ಶರ್ಮಾಗೆ ಸ್ವಲ್ಪ ಭಯವಂತೆ ! ಇವರಿಬ್ಬರ ಝೀರೋ ಚಿತ್ರ ತೆರೆಗೆ ಬರಲು ಸಿದ್ಧ 

ಬೆಂಗಳೂರು (ಸೆ. 27): ಹೊಸ ವ್ಯಕ್ತಿಗಳ ಪರಿಚಯವಾಗುವಾಗ ಸ್ವಲ್ಪ ಭಯ ಇದ್ದೇ ಇರುತ್ತೆ. ಅಲ್ಲದೇ ಅವರು ದೊಡ್ಡ ವ್ಯಕ್ತಿ ಆಗಿದ್ದರಂತೂ ಅವರೊಂದಿಗೆ ಮಾತನಾಡುವಾಗ ಭಯ, ಅಂಜಿಕೆ ಇದ್ದಿದ್ದೇ. ಅದೇ ಆ ವ್ಯಕ್ತಿ ದಿನ ಕಳೆದಂತೆ ಹತ್ತಿರವಾಗಿಬಿಟ್ಟರೆ ಅವರೊಂದಿಗೆ ಮಾತನಾಡುವುದು, ಭಾವನೆಗಳನ್ನು ಶೇರ್ ಮಾಡಿಕೊಳ್ಳುವುದು ತುಂಬಾ ಸುಲಭ ಅಲ್ಲವೇ. ಈಗ ಅಂತಹುದೊಂದು ಕಂಫರ್ಟ್ ಫೀಲ್ ಪಡೆಯುತ್ತಿರುವುದು ಅನುಷ್ಕಾ ಶರ್ಮಾ, ಅದೂ ಶಾರೂಕ್ ಖಾನ್ ಜೊತೆಗೆ.

Add Asianetnews Kannada as a Preferred SourcegooglePreferred

‘ರಬ್ ನೇ ಬನಾದಿ ಜೋಡಿ’ ಚಿತ್ರದಲ್ಲಿ ಒಟ್ಟಿಗೆ ನಟಿಸು ವಾಗ ಅನುಷ್ಕಾ ಬಾಯಿ ತಪ್ಪಿ ಹೆದರಿಕೆಯಿಂದ ಏನೇನೋ ಹೇಳಿ, ಮತ್ತೆ ನಾನ್ಯಾಕೆ ಹಾಗೆ ಹೇಳಿದೆ, ನಾನ್ಯಾಕೆ ಹಾಗೆ ನಡೆದುಕೊಂಡೆ ಎಂದು ಫೀಲ್ ಮಾಡಿಕೊಳ್ಳುತ್ತಿದ್ದರಂತೆ.

ಆದರ ಅದಾದ ಮೇಲೆ ಎರಡು ಮೂರು ಚಿತ್ರಗಳನ್ನು ಒಟ್ಟಿಗೆ ಮಾಡಿದ್ದರ ಪರಿಣಾಮ, ಪರಸ್ಪರ ಚೆನ್ನಾಗಿ ಅರ್ಥ ಮಾಡಿಕೊಂಡದ್ದರ ಪರಿಣಾಮವೀಗ ಅನುಷ್ಕಾಗೆ ಮೋರ್ ಕಂಫರ್ಟಬಲ್ ಫೀಲ್ ಸಿಗುತ್ತಿದೆಯಂತೆ. ಹೀಗಂತ ಸ್ವತಃ ಅನುಷ್ಕಾರೇ
ಹೇಳಿಕೊಂಡಿದ್ದಾರೆ. ಈಗ ಇವರಿಬ್ಬರೂ ಒಟ್ಟಿಗೆ ನಟಿಸಿರುವ ‘ಝಿರೋ’ ಚಿತ್ರ ತೆರೆಗೆ ಬರಲು ಸಿದ್ಧವಾಗಿರುವ ಹೊತ್ತಿನಲ್ಲೇ ಅನುಷ್ಕಾ ಶಾರೂಕ್ ಬಗ್ಗೆ ಗುಣಗಾನ ಮಾಡಿದ್ದಾರೆ.