ಟುಸ್ಸಾಡ್‌ನಲ್ಲಿ ಅನುಷ್ಕಾ ಶರ್ಮಾ ಮೇಣದ ಪ್ರತಿಮೆ

Anushka Sharma a first Indian gets a talking statue at Madame Tussauds
Highlights

ಓಫ್ರಾ ವಿನ್‌ಫ್ರೇ, ರೊನಾಲ್ಡೋ ಮುಂತಾದ ಗಣ್ಯರ ಜತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮೇಣದ ಪ್ರತಿಮೆ ಸಿಂಗಾಪುರದ ಮೇಡೆಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಕಾಣಿಸಿಕೊಳ್ಳಲಿದೆ. ಇಂಥ ಗೌರವ ಇನ್ಯಾವ ಭಾರತೀಯರು ಪಡೆದಿದ್ದಾರೆ?

ಸಿಂಗಾಪುರ್: ನೀವು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಭಿಮಾನಿಯಾಗಿದ್ದರೆ, ಇಲ್ಲಿದೆ ನಿಮಗೊಂದು ಗುಡ್ ನ್ಯೂಸ್. ಅನುಷ್ಕಾ ಜೊತೆ ಸೆಲ್ಫೀ ತೆಗೆಯುವ ನಿಮ್ಮ ಕನಸು ನನಸಾಗಬಹುದು. ಅಂದರೆ ಅನುಷ್ಕಾ ಅವರ ಮಾತನಾಡುವ ಮೇಣದ ಪ್ರತಿಮೆ ಸಿಂಗಾಪುರದ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಕಾಣಿಸಿಕೊಳ್ಳಲಿದೆ. 

ಹೌದು, ಸದ್ಯದಲ್ಲೇ ಅನುಷ್ಕಾ ಶರ್ಮಾರ ಮೇಣದ ಪ್ರತಿಮೆ ಸಿಂಗಾಪುರದ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಇತರೆ ಹಲವಾರು ದಿಗ್ಗಜರೊಂದಿಗೆ ಕಾಣಿಸಿಕೊಳ್ಳಲಿದೆ. ಅನುಷ್ಕಾ ಮೂರ್ತಿಯ ವಿಶೇಷತೆ ಎಂದರೆ ಮಾತನಾಡುವ ಪ್ರತಿಮೆಯ ಇದಾಗಿದೆ. ಈ ಅವಕಾಶ ಪಡೆದುಕೊಂಡ ಮೊದಲ ಭಾರತೀಯರು ಇವರು.

ಒಫ್ರಾ ವಿನ್‌ಫ್ರೇ, ಲೆವಿಸ್ ಹ್ಯಾಮಿಲ್ಟನ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಸೇರಿ ಅನೇಕ ಗಣ್ಯರ ಪ್ರತಿಮೆಗಳಿ ಈಗಾಗಲೇ ಇಲ್ಲಿವೆ. 
 

loader