ಬಾಲಿವುಡ್ ನಟಿ ಕಿರಣ್ ಖೇರ್ ಹುಟ್ಟು ಹಬ್ಬದ ದಿನ ಪತಿ ಅನುಪಮ್ ಖೇರ್ ಪತ್ನಿಯ ಹಳೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಹಳೆಯ ಬ್ಲಾಕ್‌&ವೈಟ್ ಫೋಟೋ ಪೋಸ್ಟ್ ಮಾಡಿ ಪತ್ನಿಗೆ 65ನೇ ವರ್ಷದ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ತಾವು ಕಿರಣ್‌ನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ ಅವರು, ಶೀಘ್ರದಲ್ಲಿಯೇ ಅವರನ್ನು ಭೇಟಿಯಾಗುವುದಾಗಿಯೂ ತಿಳಿಸಿದ್ದಾರೆ. ನನ್ನ ಪ್ರೀತಿಯ ಕಿರಣ್‌ಗೆ ಹ್ಯಾಪಿ ಬರ್ತ್‌ಡೇ. ಈ ಜಗತ್ತಿನಲ್ಲಿರುವ ಎಲ್ಲ ಖುಷಿಯನ್ನು ಭಗವಂತ ನಿನಗೆ ಕರುಣಿಸಲಿ. ನಾವೀಗ ನಿನ್ನೊಂದಿಗಿಲ್ಲ. ಸಾರಿ. ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಶೀಘ್ರ ನಿನ್ನನ್ನು ಭೇಟಿಯಾಗುತ್ತೇವೆ ಎಂದು ಬರೆದುಕೊಂಡಿದ್ದಾರೆ.

'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!

ಚಂಡೀಗಢ ಲೋಕಸಭಾ ಕ್ಷೇತ್ರದ ಎಂಪಿ ಕಿರಣ್ ಸದ್ಯ ತಮ್ಮ ಕರ್ತವ್ಯದಲ್ಲಿ ಬ್ಯುಸಿ ಇದ್ದಾರೆ. ಕಿರಣ್ ಕೊರೋನಾ ಸಂದರ್ಭ ತಮ್ಮ ಮನೆಯಲ್ಲಿ ಕುಳಿತಿದ್ದಾರೆ ಎಂಬ ಆರೋಪಕ್ಕೆ ನಟಿ ವಿಡಿಯೋ ಮಾಡಿ ತಾವು ಚಂಡೀಗಢದಲ್ಲಿರುವುದಾಗಿ ತಿಳಿಸಿದ್ದರು.

ನಾನು ಮಂಬೈನಲ್ಲಿದ್ದೇನೆಂದು ಹೇಳುತ್ತಿದ್ದೀರಿ. ನಾನಲ್ಲಿದ್ದರೆ ಎಷ್ಟು ಚೆನ್ನಾಗಿತ್ತು ನಾನಿಲ್ಲಿ ಒಬ್ಬಳೇ ಇದ್ದೇನೆ. ನೀವೆಲ್ಲರೂ ನಿಮ್ಮ ಕುಟುಂಬದ ಜೊತೆಗಿದ್ದೀರಿ ಎಂದಿದ್ದರು.

#NewsIn100Seconds ಈ ಕ್ಷಣದ ಪ್ರಮುಖ ಸುದ್ದಿಗಳು

"