ಬೆಂಗಳೂರು (ಜ.12): ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಗೊತ್ತೇ ಇದೆ. ಇದೀಗ ಮನೆಯ ಮುದ್ದು ಲಕ್ಷ್ಮೀ ಜೊತೆಗಿನ ಫೋಟೋವನ್ನು ಹಾಕಿ ಎಲ್ಲರಿಗೂ ಪರಿಚಯಿಸಿದ್ದಾರೆ. 
ನಟಿ  ಅನು ಪ್ರಭಾಕರ್, ಪತಿ ರಘು ಮುಖರ್ಜಿ ಹಾಗೂ ಮಗಳ ಜೊತೆಗಿರುವ ಫೋಟೋವನ್ನು ಹಾಕಿ ’ನಿಮಗೆಲ್ಲರಿಗೂ ಪರಿಚಯಿಸುತ್ತಿದ್ದೇವೆ, ನಮ್ಮ ಮಗಳು ನಂದನ ಪ್ರಭಾಕರ್ ಮುಖರ್ಜಿ’ ಎಂದು ಬರೆದುಕೊಂಡಿದ್ದಾರೆ.

 

ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ 2016 ಏಪ್ರಿಲ್ 25 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಗಸ್ಟ್ 15, 2018 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಂದನ ಪ್ರಭಾಕರ್ ಮುಖರ್ಜಿ ಎಂದು ಹೆಸರಿಟ್ಟಿದ್ದಾರೆ. 

 ಇತ್ತೀಚಿಗೆ ರಘು ಮುಖರ್ಜಿ ಮಗಳೊಂದಿಗಿನ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. 

 ಅಪ್ಪ-ಮಗಳು ಶಾಪಿಂಗ್ ಹೊರಟ ಕ್ಷಣ 

 ಅನು ಪ್ರಭಾಕರ್-ರಘು ಮುಖರ್ಜಿ ಮಗಳೊಂದಿಗೆ ಕ್ರಿಸ್‌ಮಸ್ ವಿಶ್ ಮಾಡಿದ್ದು ಹೀಗೆ