ನಟಿ ಅನುಪ್ರಭಾಕರ್ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ಮೇಲೆ ಸಿನಿಮಾದಿಂದ ದೂರ ಉಳಿದಿದ್ದರು. ಈಗ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. 

ರಾಧಿಕಾ-ಯಶ್ ಲಿಟಲ್ ಪ್ರಿನ್ಸೆಸ್ ’ಐರಾ’ ಮುದ್ದು ಫೋಟೋಗಳಿವು

ನೆನಪಿರಲಿ ಪ್ರೇಮ್ ಬಹು ನಿರೀಕ್ಷೆಯ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಅನು ಪ್ರಭಾಕರ್ ಡಾಕ್ಟರ್ ಆಗಿ ಮಿಂಚಲಿದ್ದಾರೆ.  ಚಿತ್ರದ ಕೊನೆಯಲ್ಲಿ ಇವರು ಎಂಟ್ರಿ ಕೊಡಲಿದ್ದಾರೆ. ಡೆಹ್ರಾಡೂನ್ ನಲ್ಲಿ ಶೂಟಿಂಗ್ ನಡೆಯುತ್ತಿದೆ. 

ಪ್ರೇಮಂ ಪೂಜ್ಯಂ ನಲ್ಲಿ ನೆನಪಿರಲಿ ಪ್ರೇಮ್ ನಾಯಕನಾಗಿ ನಟಿಸುತ್ತಿದ್ದರೆ ಐಂದ್ರಿತಾ ರೇ ನಾಯಕಿಯಾಗಿ ನಟಿಸಿದ್ದಾರೆ. ಡಾ. ರಾಘವೇಂದ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 

44ರಲ್ಲೂ ಯೌವನ ಕಾಯ್ದುಕೊಂಡ ಕರೀಶ್ಮಾಳ ಡಯಟ್ ಸೀಕ್ರೆಟ್ಸ್

ಪ್ರೇಮಂ ಪೂಜ್ಯಂ ಪ್ರೇಮ್ ಹಾಗೂ  ಐಂದ್ರಿತಾಗೆ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಮೊದಲು ಅತಿರೂಪ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ಚೌಕ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಪ್ರೇಮಂಪೂಜ್ಯಂ ನಲ್ಲಿ ಮತ್ತೆ ಒಂದಾಗಿದ್ದಾರೆ. ಐಂದ್ರಿತಾ ರೈ ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ.