ಮುಂಬೈ (ಡಿ. 06): ಅಪ್ರತಿಮ ಸುಂದರಿ, ಚಿತ್ರರಂಗದ ದಂತಕತೆ ಶ್ರೀದೇವಿ ಅಕಾಲಿಕ ಮರಣ ಹೊಂದಿದ್ದು ಎಲ್ಲರಿಗೂ ಬೇಸರದ ಸಂಗತಿ. ತಮ್ಮ ಮನೋಜ್ಞ ಅಭಿನಯ, ಸೌಂದರ್ಯ, ನೃತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. 

ಶ್ರೀದೇವಿ ಮೈದುನ ಅನಿಲ್ ಕಪೂರ್ ಆಕೆಯ ಬಗೆಗಿನ ಇಂಟರೆಸ್ಟಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ.  ಅನಿಲ್ ಕಪೂರ್ ಶ್ರೀದೇವಿಯನ್ನು ಭೇಟಿಯಾದಾಗಲೆಲ್ಲಾ ಕಾಲಿಗೆ ಬೀಳುತ್ತಿದ್ದರಂತೆ. ಸಂದರ್ಭ, ಸ್ಥಳ, ಎದುರಿಗೆ ಯಾರಿದ್ದಾರೆ,ಇಲ್ಲ ಎಂಬುದೆಲ್ಲಾ ನೋಡದೇ ಕಾಲಿಗೆ ಬೀಳುತ್ತಿದ್ದರಂತೆ. ಇದರಿಂದ ಶ್ರೀದೇವಿ ಬಹಳ ಮುಜುಗರ ಅನುಭವಿಸುತ್ತಿದ್ದರಂತೆ.  ಹೀಗೆಲ್ಲಾ ಮಾಡಬೇಡ ಎಂದು ಹೇಳುತ್ತಿದ್ದರು ಎಂದು ಅನಿಲ್ ಕಪೂರ್ ಹೇಳಿದ್ದಾರೆ. 

"ಶ್ರೀದೇವಿ ಅಂದರೆ ನನಗೆ ಅಪಾರ ಅಭಿಮಾನ. ಅವರ ಅಭಿನಯಕ್ಕೆ ಮನಸೋತಿದ್ದೇನೆ. ನಾನು ಆ ಚಿತ್ರದಲ್ಲಿ ಇರಲಿ, ಇಲ್ಲದಿರಲಿ ಶ್ರೀದೇವಿಯ ಪ್ರತಿ ಸೀನನ್ನು ಕುಳಿತು ನೋಡುತ್ತಿದ್ದೆ. ಅವರು ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡುವುದನ್ನು ನೋಡುವುದೇ ಸೊಗಸು" ಎಂದು ಅನಿಲ್ ಕಪೂರ್ ಹೇಳಿದ್ದಾರೆ. 

‘ಒಬ್ಬ ಕಲಾವಿದನಾಗಿ ನಾನು ಶ್ರೀದೇವಿ ಜಿ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ. ನನ್ನ ಕರಿಯರ್ ಗೆ ಅವರ ಕೊಡುಗೆ ಬಹಳಷ್ಟಿದೆ. ಅಪಾರ ಪ್ರತಿಭೆಯನ್ನು ಹೊಂದಿದ ಅದ್ಭುತ ನಟಿಯಿವರು‘ ಎಂದು ಶ್ಲಾಘಿಸಿದ್ದಾರೆ.