Viral Video: ಹಾರ ಹಾಕುವಾಗಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ!

ಹಾರ ಹಾಕುವಾಗಲೇ ವಧುವಿನ ಕಪಾಳಕ್ಕೆ ಬಾರಿಸಿದ ವರ

ವೇದಿಕೆಯಲ್ಲೇ ವಧು-ವರ ಹೊಡೆದಾಟ

ಮದುವೆಗೆ ಬಂದಿದ್ದವರಿಗೆ ಶಾಕ್
 

Angry Groom Slaps Bride During Varmala Ceremony see Viral Video san

ಬೆಂಗಳೂರು (ಮಾ.3): ಇತ್ತೀಚಿನ ದಿನಗಳಲ್ಲಿ ಮದುವೆಯ (Wedding) ವಿಡಿಯೋಗಳು ಅಲ್ಲಿನ ತಮಾಷೆ ಹಾಗೂ ನಾಟಕೀಯ ವಿಷಯಗಳಿಂದಾಗಿ ಅಂತರ್ಜಾಲದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ. ಹಾಗಂತ ಎಲ್ಲಾ ವಿವಾಹದ ವಿಡಿಯೋಗಳು ಸ್ಪೆಷಲ್ ಆಗಿರುವುದಿಲ್ಲ. ಕೆಲವೊಂದು ರೊಮಾಂಟಿಕ್ (Romantic) ಕಾರಣಕ್ಕಾಗಿ ಸುದ್ದಿಯಾದರೆ, ಇನ್ನೂ ಕೆಲವು ತಮಾಷೆಯ (Fun) ಕಾರಣಕ್ಕಾಗಿ ವೈರಲ್ ಆಗುತ್ತವೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ವಧು-ವರರು ಹಾರ ಹಾಕಿಕೊಳ್ಳುವ ಸಮಯದಲ್ಲಿಯೇ ದೊಡ್ಡಮಟ್ಟದ ಜಗಳ (Fight) ಮಾಡಿಕೊಂಡಿದ್ದಲ್ಲಿ, ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ. ವರ, ಹಾರ ಹಾಕುವ ಸಮಯದಲ್ಲಿ ವಧುವಿನ ಕೆನ್ನೆಗೂ ಬಾರಿಸಿದ್ದಾರೆ.

ಮದುವೆಯ ಸಮಾರಂಭದ ವೇದಿಕೆಯಲ್ಲಿ ವಧು-ವರ ತಮ್ಮ ಸಂಬಂಧಿಗಳ ನಡುವೆ ಪರಸ್ಪರ ಎದುರಾಗಿ ನಿಂತಿರುವುದನ್ನು ವಿಡಿಯೋ ತೋರಿಸಿದೆ. ಆದರೆ, ಮದುವೆಯಿಂದ ಯುವಕ ಒಂಚೂರು ಸಂತಸವಾಗಿಲ್ಲ ಎನ್ನುವುದು ಅವರ ವರ್ತನೆಯಿಂದಲೇ ತಿಳಿಯುತ್ತಿತ್ತು."ಬೇಕಾದ್ರೆ ತಿನ್ನು" ಅನ್ನೋ ವರ್ತನೆಯಲ್ಲೇ ಯುವತಿಗೆ ಸಿಹಿ ತಿನ್ನಿಸುವ ಕೆಲಸ ಮಾಡಲು ಯತ್ನಿಸಿದರೆ, ಇನ್ನೊಂದೆಡೆ ಯುವತಿ ತನ್ನ ಮುಖವನ್ನು ತಿರುಗಿಸುತ್ತಾಳೆ.  ಇದರಿಂದ ಸಿಟ್ಟಿಗೆದ್ದ ವರನು ಆಕೆಯ ಮೇಲೆ ಸಿಹಿತಿಂಡಿಗಳನ್ನು ಎಸೆದಿದ್ದಾನೆ.

ಅಷ್ಟರಲ್ಲಿ ವಧು ಕೂಡ ಕೋಪಗೊಂಡು ಸಿಹಿತಿಂಡಿಗಳನ್ನು ಎತ್ತಿಕೊಂಡು ವರನ ಮೇಲೆ ಎಸೆದಿದ್ದಾಳೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಯುವಕ, ವಧುವಿಗೆ ವೇದಿಕೆಯಲ್ಲೇ ಕಪಾಳಕ್ಕೆ ಬಾರಿಸಿದ್ದಾನೆ. ಕೆಲವೇ ಕ್ಷಣದಲ್ಲಿ ಈ ಎಲ್ಲಾ ಘಟನೆಗಳು ನಡೆದಿದ್ದರಿಂದ ಅಕ್ಕ-ಪಕ್ಕದಲ್ಲಿ ನಿಂತಿದ್ದವರು ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋವನ್ನು ರಾಮ್‌ಸುಭಾಗ್ ಯಾದವ್ ಅವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದುವರೆಗೆ 2.3 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.


ಇಬ್ಬರೂ ಬಲವಂತವಾಗಿ ಮದುವೆಯಾಗುತ್ತಿರುವಂತೆ ತೋರುತ್ತಿದೆ ಎಂದು ಫೇಸ್ ಬುಕ್ ಬಳಕೆದಾರರು ತಕ್ಷಣವೇ ಊಹೆ ಮಾಡಿದ್ದಾರೆ. ಮದುವೆಯ ದಿನದಂದೇ ವಧುವರರು ಜಗಳವಾಡುತ್ತಿದ್ದರೆ ಆ ಮದುವೆ ಹೆಚ್ಚುಕಾಲ ಉಳಿಯುವುದಿಲ್ಲ ಎನ್ನುವುದು ನಂಬಿಕೆ. ಆದರೆ, ಈ ವಿಡಿಯೋವನ್ನು ಬಹುತೇಕರು ತಮಾಷೆಯಾಗಿ ತೆಗೆದುಕೊಂಡು ನಗುವಿನ ಇಮೋಜಿಯನ್ನು ಹಾಕಿದ್ದಾರೆ. ಇನ್ನೂ ಕೆಲವರು ಮಹಿಳೆಯ ಮೇಲೆ ಪುರುಷನ ದೌರ್ಜನ್ಯದ ನಡವಳಿಕೆಯನ್ನು ಪ್ರಶ್ನೆ ಮಾಡಿದ್ದಾರೆ.

ಮರಾಠಿ ಪದ್ಧತಿಯಂತೆ ಮತ್ತೆ ಮದುವೆ; ಫೋಟೋ ಶೇರ್‌ ಮಾಡಿದ ಅಂಕಿತಾ ಲೋಖಂಡೆ
ಇನ್ನು ಭಾರತದಲ್ಲಿ ಮಾತ್ರವಲ್ಲ ಇಂಥ ಘಟನೆಗಳು ವಿದೇಶದಲ್ಲ ನಡೆಯುತ್ತವೆ. ಇತ್ತೀಚೆಗೆ . ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ಕೂಡ ಮದುವೆ ಆರತಕ್ಷತೆಯ ನಂತರ ದೊಡ್ಡ ಹೊಡೆದಾಟ ನಡೆದಿದ್ದು, ಬೀದಿ ಕಾಳಗವಾಗಿ ಮಾರ್ಪಟ್ಟಿದೆ. ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಿಡ್ನಿ(Sydney) ಉಪನಗರದಲ್ಲಿ ನಡೆದ ಮದುವೆಯೊಂದರ ನಂತರ ಅತಿಥಿಗಳು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ವಿಡಿಯೋದಲ್ಲಿ ಔಪಾಚಾರಿಕ ಉಡುಪು ಧರಿಸಿದ್ದ ಡಜನ್‌ಗೂ ಹೆಚ್ಚಿರುವ ಜನರು ಪರಸ್ಪರ ಹೊಡೆದಾಡಿಕೊಂಡಿದ್ದು ಸಿಡ್ನಿಯ ಮೊಸ್‌ಮನ್‌ನಲ್ಲಿ (Mosman) ಘಟನೆ ನಡೆದಿದೆ. ಹೊಡೆದಾಟದಿಂದಾಗಿ ಓರ್ವ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದರಿಂದ ಆ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. 

ಮದುವೆಯಿಂದ ಆರಂಭ.. ಬೀದಿಯಲ್ಲೂ ಹಿಗ್ಗಾಮುಗ್ಗಾ ಹೊಡೆದಾಟ ವಿಡಿಯೋ ವೈರಲ್‌
ಇನ್ನು  ಛತ್ತೀಸ್‌ಗಢದಲ್ಲಿ ಆದ ಒಂದು ಪ್ರಸಂಗದಲ್ಲಿ ಯುವತಿಯೊಬ್ಬಳು ಮದುವೆಯಾಗಿ ಗಂಡನ ಮನೆಗೆ ತೆರಳುವಾಗ ದಾರಿಯ ಮಧ್ಯೆ ಶೌಚಾಲಯಕ್ಕೆ ಹೋಗಬೇಕೆಂದು ಹೇಳಿ, ಅಲ್ಲಿಂದಲೇ ಎಸ್ಕೇಪ್ ಆಗಿದ್ದಳು. ಅವಳಿಗಾಗಿ ಮಾರ್ಗಮಧ್ಯೆ ದಿಬ್ಬಣವನ್ನು ನಿಲ್ಲಿಸಲಾಯಿತು. ಆದರೆ, ಶೌಚಾಲಯಕ್ಕೆ ಹೋದವಳು ಎಷ್ಟು ಹೊತ್ತಾದರೂ ವಾಪಾಸ್ ಬರಲೇ ಇಲ್ಲ. ಇದರಿಂದ ವರನ ಮನೆಯವರಿಗೆ ಆತಂಕವಾಗಿ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಿದಾಗ ಆ ಯುವತಿ ತನ್ನ ಮದುವೆಯಾದ ನಂತರ ಗಂಡನ ಮನೆಗೆ ಹೋಗುವ ಬದಲು ತನ್ನ ಪ್ರಿಯಕರ ಜೊತೆ ಓಡಿ ಹೋಗಿದ್ದಾಳೆ ಎಂಬ ವಿಷಯ ಬಯಲಾಗಿದೆ.

Latest Videos
Follow Us:
Download App:
  • android
  • ios