ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಗಾಯಕಿ, ನಟಿ ಆ್ಯಂಡ್ರಿಯಾ ಜೆರೆಮಿಯಾ ಸಿನಿಮಾ ರಂಗದಿಂದ ದೂರ ಉಳಿದಿದ್ದರು. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಅದಕ್ಕೆ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ಸಂಪೂರ್ಣವಾಗಿ ರಿಕವರ್ ಆದ ಮೇಲೆ ಕೆಲಸಕ್ಕೆ ಮರಳುತ್ತೇನೆ ಎಂದಿದ್ದಾರೆ.  ಇದಕ್ಕಿಂತ ಇನ್ನೂ ಒಂದು ಇಂಟರೆಸ್ಟಿಂಗ್ ವಿಚಾರವೊಂದನ್ನು ಹೊರಹಾಕಿದ್ದಾರೆ. 

ಆ್ಯಂಡ್ರಿಯಾ ‘ಬ್ರೋಕನ್ ವಿಂಗ್’ ಎನ್ನುವ ಕವನ ಸಂಕಲನವೊಂದನ್ನು ಬರೆದಿದ್ದು ಅದರ ಬಿಡುಗಡೆಗೆ ಬೆಂಗಳೂರಿಗೆ ಆಗಮಿಸಿದ್ದರು. ಆ ವೇಳೆ ಪುಸ್ತಕದ ಬಗ್ಗೆ ಮಾತನಾಡುತ್ತಾ., ನಾನು ವಿವಾಹಿತನೊಬ್ಬನನ್ನು ಪ್ರೀತಿಸಿದೆ. ಅವನು ನನಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ. ಅದರಿಂದ ಡಿಪ್ರೇಶನ್ ಗೆ ಹೋದೆ. ಡಿಪ್ರೇಶನ್ ನಿಂದ ಹೊರ ಬರಲು ಆಯುರ್ವೇದ ಡಿಟಾಕ್ಸ್ ಸೆಂಟರ್ ಗೆ ಸೇರಿಕೊಂಡೆ. ಕೆಲಸದಿಂದ ಬ್ರೇಕ್ ತೆಗೆದುಕೊಂಡೆ.