ವಿಲನ್ ನಟಿ ಆ್ಯಮಿ ಜಾಕ್ಸನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ಮೊದಲ ವಾರ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. 

ಮಗು ಹುಟ್ಟುವ ಮೊದಲೇ ಗಂಡು ಮಗು ಎಂಬುದನ್ನು ರಿವೀಲ್ ಮಾಡಿದ್ದಾರೆ. ಲಿಂಗ ಪರೀಕ್ಷೆ ಮಾಡಿಸಿದ್ದು ಮಗುವಿನ ಲಿಂಗವನ್ನು ಬಹಿರಂಗಪಡಿಸಿದ್ದಾರೆ. ಲ್ಯಾವೀಶ್ ಜೆಂಡರ್ ಪಾರ್ಟಿಯ ವಿಡಿಯೋವನ್ನು ಆ್ಯಮಿ ಶೇರ್ ಮಾಡಿದ್ದಾರೆ. 

 

ಜಾರ್ಜ್ ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರವನ್ನು ಆ್ಯಮಿ ಜಾಕ್ಸನ್ 2019 ರ ಶುರುವಿನಲ್ಲಿ ಬಹಿರಂಗಪಡಿಸಿದ್ದರು. ಜಾರ್ಜ್- ಆ್ಯಮಿ ಆಗಾಗ ವಿದೇಶಿ ಪ್ರವಾಸ, ಹಾಲಿಡೇ ಟ್ರಿಪ್ ಅಂತೆಲ್ಲಾ ಸುತ್ತಾಡುತ್ತಿದ್ದರು. ಜೊತೆಗೆ ಆ್ಯಮಿ ಬೇರೆ ಬೇರೆ ಬ್ರಾಂಡ್ ಗಳ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದರು. 

ಮೂಲಗಳ ಪ್ರಕಾರ 2020 ರಲ್ಲಿ ಆ್ಯಮಿ- ಜಾರ್ಜ್ ಗ್ರೀಕ್ ಸಂಪ್ರದಾಯದ ಪ್ರಕಾರ ಮದುವೆಯಾಗಲಿದ್ದಾರೆ ಎನ್ನಲಾಗಿದೆ.