ಚಿರು, ನಿಶ್ಚಿಕಾ ನಟನೆಯ ಅಮ್ಮ ಐ ಲವ್ ಯು ಜೂನ್ 15ಕ್ಕೆ ರಿಲೀಸ್
ಬೆಂಗಳೂರು: ತಾಯಂದಿರ ದಿನ ರಿಲೀಸ್ ಆದ 'ಅಮ್ಮಾ ಐ ಲವ್ ಯೂ' ಗೀತೆಯೇ ಅಮ್ಮಂದಿರ ಮಹತ್ವ ಸಾರುವಲ್ಲಿ ಯಶಸ್ವಿಯಾಗಿತ್ತು. ಇನ್ನು ಈ ಚಿತ್ರ ಹೇಗಿರುತ್ತೆ ಎಂಬ ಕುತೂಹಲ ಇರುವವರಿಗೆ ಜೂ 15ಕ್ಕೆ ಉತ್ತರ ಸಿಗಲಿದೆ.
ಯೋಗಿ ದ್ವಾರಕೀಶ್ ನಿರ್ಮಾಣದಲ್ಲಿ ತಯಾರಾದ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ನಿಶ್ಚಿಕಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ತಾಯಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಕಥೆಯುಳ್ಳ ಈ ಸಿನಿಮಾ ತಮಿಳಿನ ಪಿಚ್ಚಾಕರನ್ ಚಿತ್ರದ ರಿಮೇಕ್. ಚೈತನ್ಯ ನಿರ್ದೇಶನದಲ್ಲಿ, ಯೋಗಿ ನಿರ್ಮಾಣ ಹಾಗೂ ಚಿರಂಜೀವಿ ನಟನೆಯ ಹ್ಯಾಟ್ರಿಕ್ ಚಿತ್ರವಿದು. ಇದೇ ತಂಡ ಈ ಹಿಂದೆ 'ಆಟಗಾರ' ಮತ್ತು 'ಆಕೆ'ಚಿತ್ರದಲ್ಲಿಯೂ ಒಟ್ಟಾಗಿ ಕಾರ್ಯನಿರ್ವಹಿಸಿತ್ತು.
ಮೇಘನಾ ರಾಜ್ ವರಿಸಿದ ನಂತರ ಬಿಡುಗಡೆಯಾಗುತ್ತಿರುವ ಚಿರಜೀವಿ ಅವರ ಮೊದಲ ಚಿತ್ರ ಇದಾಗಿದ್ದು, ಬಹಳ ಇಷ್ಟಪಟ್ಟು ನಟಿಸಿದ್ದಾರಂತೆ. ಹೇಗಿರುತ್ತೆ ಎನ್ನುವ ಕೂತಹಲ ಕನ್ನಡ ಚಿತ್ರ ರಸಿಕರಲ್ಲಿದೆ.
ಜೀರಂಜಿವಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪುಟಗಳಲ್ಲಿ ಈ ಚಿತ್ರದ ವೀಡಿಯೋ ಹಾಕಿ, ಹೇಗಿದೆ ಎಂದು ಪ್ರತಿಕ್ರಿಯೆ ನೀಡಲು ಆಗ್ರಹಿಸಿದ್ದಾರೆ.