ಅಮಿತಾಭ್ ಬಚ್ಚನ್ ಹಾಗೂ ರಮ್ಯಾ ಕೃಷ್ಣ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ಗಾಂಧಿ ನಗರದಲ್ಲಿ ಸುದ್ದಿ ಹರಿದಾಡುತ್ತಿದ್ದು ಇದರ ಬಗ್ಗೆ ಕ್ಲಾರಿಫಿಕೇಶನ್ ಇಲ್ಲಿದೆ.

Add Asianetnews Kannada as a Preferred SourcegooglePreferred

ಬಾಲಿವುಡ್‌ ಬಿಗ್ ಬಿ ತಮಿಳು ಚಿತ್ರರಂಗಕ್ಕೆ ಹಾರಿರುವುದು ಒಂದು ಅಚ್ಚರಿ ಆದರೆ ಅವರಿಗೆ ಜೋಡಿ ಆಗಿ ಕಾಣಿಸಿಕೊಳ್ಳುತ್ತಿರುವುದು ಯಾರೆಂದು ಕೇಳಿದರೆ ಕಂಡಿತ ಮತ್ತೊಂದು ಅಚ್ಚರಿ ಎದುರಾಗುತ್ತದೆ. ಬಚ್ಚನ್‌ಗೆ ಜೋಡಿ ಆಗುತ್ತಿರುವುದು ಮತ್ಯಾರು ಅಲ್ಲ. ಬಡೇ ಮಿಯಾ ಚೋಟೇ ಮಿಯಾ ನಟಿ ರಮ್ಯಾ ಕೃಷ್ಣ.

ಹೌದು, ವಯಸ್ಸಿಗೆ ಮೀರಿದ ಪಾತ್ರ ಮಾಡಿ ನಟನೆಯಲ್ಲಿ ಸೈ ಎಂದೇಳಿಸಿಕೊಂಡ ರಮ್ಯಾ ಕೃಷ್ಣ ಮಾಡಿರುವ ಚಿತ್ರವೆಲ್ಲಾ ಸೂಪರ್ ಹಿಟ್ ಅದರಲ್ಲೂ ಬಾಹುಬಲಿ ಚಿತ್ರದ ಶಿವಗಾಮಿ ಪಾತ್ರಕ್ಕೆ ಅಭಿಮಾನಿಗಳು ಫುಲ್ ಬೋಲ್ಡ್.

20 ವರ್ಷಗಳ ನಂತರ ಒಂದಾದ ಈ ಜೋಡಿ ನಟಿಸುತ್ತಿರುವುದು ' ಊರ್ಯಂಧ' ಚಿತ್ರದಲ್ಲಿ ಅಂದಹಾಗೆ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ತಮಿಳು ಚಿತ್ರರಂಗದ ಯುವ ನಿರ್ದೇಶಕ. 1998ರಲ್ಲಿ 'ಬಡೇ ಮಿಯಾ ಚೋಟೇ ಮಿಯಾ ' ಮೂಲಕ ಹಿಟ್ ಆದ ಈ ಜೋಡಿ ಮತ್ತೊಮ್ಮೆ ಅಭಿಮಾನಿಗಳ ಫೇವರಿಟ್ ಆಗುವುದಂತೂ ಗ್ಯಾರಂಟಿ.