ತಮನ್ನಾ ಭಾಟಿಯಾ ಮತ್ತು ದಿಲೀಪ್ ಅಭಿನಯದ 'ಬಾಂದ್ರಾ' ಚಿತ್ರವು ನವೆಂಬರ್ 13 ರಿಂದ ZEE5 ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಬಾಲಿವುಡ್ ನಟಿಯೊಬ್ಬಳ ಅನುಮಾನಾಸ್ಪದ ಸಾವು ಮತ್ತು ಗ್ಯಾಂಗ್‌ಸ್ಟರ್ ನಡುವಿನ ಪ್ರೇಮಕಥೆಯನ್ನು ಈ ಆಕ್ಷನ್ ಥ್ರಿಲ್ಲರ್ ಒಳಗೊಂಡಿದೆ.

ಮಿಲ್ಕಿ ಬ್ಯೂಟಿ ತಮನ್ನಾ ಅಭಿನಯದ ಮಲಯಾಳಂ ಚಿತ್ರ ಬಾಂದ್ರಾ(Bandra) ಚಿತ್ರವು ಕಳೆದ 2023 ರಲ್ಲಿ ಬಿಡುಗಡೆಯಾಗಿತ್ತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಇದೀಗ ಬರೋಬ್ಬರಿ ಮೂರು ವರ್ಷಗಳ ಬಳಿಕ OTT ಗೆ ಬರಲು ಸಿದ್ಧವಾಗಿದೆ.

'ಬಾಂದ್ರಾ' ಸಿನಿಮಾ ನವೆಂಬರ್ 13 ರಿಂದ ಜನಪ್ರಿಯ OTT 'ZEE5' ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದು ಮಲಯಾಳಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದರೂ ತೆಲುಗಿನಲ್ಲೂ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ. ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲವಾಗಿಲ್ಲ.'ರಾಮ್ ಲೀಲಾ' ಖ್ಯಾತಿಯ ಅರುಣ್ ಗೋಪಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ದಿಲೀಪ್ ನಾಯಕನಾಗಿ, ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೆ ಡಿನೋ ಮೋರಿಯಾ, ಮಮತಾ ಮೋಹನ್ ದಾಸ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 35 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಕೇವಲ 2 ಕೋಟಿ ರೂ.ಗಳನ್ನು ಗಳಿಸಿತ್ತು!

ಆಕ್ಷನ್ ಥ್ರಿಲ್ಲರ್ ಬಾಂದ್ರಾ ಚಿತ್ರದ ಕಥೆ ಏನು?

1990 ರ ದಶಕದಲ್ಲಿ ಸಂಚಲನ ಸೃಷ್ಟಿಸಿದ ಬಾಲಿವುಡ್ ನಾಯಕಿ ತಾರಾ ಜಾನಕಿ (ತಮನ್ನಾ ಭಾಟಿಯಾ) ಅನುಮಾನಾಸ್ಪದವಾಗಿ ಸಾಯುತ್ತಾಳೆ. ಸಾಕ್ಷಿ (ಮಮತಾ ಮೋಹನ್ ದಾಸ್) ಎಂಬ ಯುವ ನಿರ್ದೇಶಕಿ ಈ ಸಾವಿನ ಹಿಂದಿನ ಸತ್ಯವನ್ನು ಬಯಲು ಮಾಡಲು ಮುಂದಾಗುತ್ತಾಳೆ. ಆಗ ಅವಳು ಅದನ್ನು ಸಿನಿಮಾವನ್ನಾಗಿ ಮಾಡಲು ಪ್ಲಾನ್ ಮಾಡುತ್ತಾಳೆ. ಫ್ಲ್ಯಾಶ್‌ಬ್ಯಾಕ್ ನೋಡೋದಾದ್ರೆ, ತಾರಾ ತನ್ನ ಮೇಲೆ ವಿಧಿಸಲಾದ ನಿರ್ಬಂಧಗಳಿಂದ ತಪ್ಪಿಸಿಕೊಂಡು ಕೇರಳಕ್ಕೆ ಹೋಗುತ್ತಾಳೆ. ಅಲ್ಲಿ, ಅವಳಿಗೆ ಅಲೆಕ್ಸಾಂಡರ್ ಡೊಮಿನಿಕ್ (ದಿಲೀಪ್) ಎಂಬ ಗ್ಯಾಂಗ್‌ಸ್ಟರ್ ಬೆಂಬಲ ನೀಡುತ್ತಾನೆ. ಅವನು ಒಬ್ಬ ಕಟ್ಟಾ ಅಭಿಮಾನಿ. ಇಬ್ಬರ ನಡುವೆ ಪ್ರೀತಿ ಅರಳುತ್ತದೆ.

ಮತ್ತೊಂದೆಡೆ ರಾಘವೇಂದ್ರ ದೇಸಾಯಿಯ ಜನರು ತಾರಾಳನ್ನು ಹುಡುಕುತ್ತಾ ಮುಂಬೈನಿಂದ ಕೇರಳಕ್ಕೆ ಬರುತ್ತಾರೆ. ಮುಂಬೈ ತಲುಪಿರುವ ತಾರಾ ಹೊಸ ಚಿತ್ರಗಳಿಗೆ ಪ್ಲಾನ್ ಮಾಡಿರುತ್ತಾಳೆ. ಅದಕ್ಕೆ ದಿಲೀಪ್ ಬಜೆಟ್‌ಗೆ ಸಹಾಯ ಮಾಡುತ್ತಾನೆ. ಇದು ಫ್ಲ್ಯಾಷ್‌ಬ್ಯಾಕ್ ಆಗಿದ್ದರೆ, ಜಾನಕಿಯೇ ತಾರಾಳನ್ನು ಕೊಲೆ ಮಾಡಿದ್ದಾಳೆಂದು ಸಾಕ್ಷಿಗೆ ತಿಳಿಯುತ್ತದೆ. ಅವಳನ್ನು ನಿಜವಾಗಿಯೂ ಕೊಂದವರು ಯಾರು? ತಾನು ಪ್ರೀತಿಸಿದ ಯುವತಿಯನ್ನು ಕೊಂದ ಡೊಮಿನಿಕ್ ಏನು ಮಾಡಿದನು? ಡೊಮಿನಿಕ್ ಮತ್ತು ತಾರಾ ಅವರ ಪ್ರೇಮಕಥೆ ಏನಾಯಿತು? ತಿಳಿಯಲು ನೀವು ಸಿನಿಮಾ ನೋಡಲೇಬೇಕು.