ಬಾಲಿವುಡ್ ಸ್ಟಾರ್ ಅಮಿತಾಬಚ್ಚನ್ ಬಿಹಾರದ ಎರಡು ಸಾವಿರ ರೈತರ ಸಾಲ ಮನ್ನಾ ಮಾಡಿ ಹೃದಯ ವೈಶಾಲ್ಯತೆ ತೋರಿದ್ದಾರೆ. 

ರೈತರಿಗೆ ಭರವಸೆಯನ್ನು ಕೊಟ್ಟಿದ್ದೆವು. ಅದರಂತೆ ನಡೆದುಕೊಂಡಿದ್ದೇವೆ. ಬಿಹಾರದ 2 ಸಾವಿರ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಒಂದೇ ಬಾರಿಗೆ ಎಲ್ಲಾ ಕಂತಿನ ಸಾಲದ ಮೊತ್ತವನ್ನು ಪಾವತಿಸಿದ್ದೇವೆ. ಕೆಲವರಿಗೆ ವೈಯಕ್ತಿಕವಾಗಿ ಕೊಟ್ಟಿದ್ದೇವೆ ಎಂದು ಅಮಿತಾಬ್ ಬ್ಲಾಗ್ ನಲ್ಲಿ ಬೆದುಕೊಂಡಿದ್ದಾರೆ. 

ಅಮಿತಾಬಚ್ಚನ್ ಸಾಲಮನ್ನಾ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಕೂಡಾ ಉತ್ತರ ಪ್ರದೇಶದ ಸಾವಿರಾರು ರೈತರ ಸಾಲವನ್ನು ಮನ್ನಾ ಮಾಡಿದ್ದರು.