ಈ ಮೂವರ ಜೊತೆ ಕೆಲಸ ಮಾಡಲು ಬಿಗ್ ಬಿಗೆ ಭಯವಂತೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Aug 2018, 3:41 PM IST
Amitabh Bachchan is scared to work with Alia, Ranbir, Deepika Padukone
Highlights

ಬಿಗ್‌ಬಿಗೆ ಇವರ ಜೊತೆ ಕೆಲಸ ಮಾಡಲು ಭಯವಂತೆ ! | ಇಡೀ ಬಾಲಿವುಡ್ ಇವರಿಗೆ ಭಯಪಟ್ಟುಕೊಂಡರೆ ಇವರು ಮಾತ್ರ ಈ ಮೂವರಿಗೆ ಭಯಪಡುತ್ತಾರೆ! | ಏನಿರಬಹುದು ಕಾರಣ? ಇಲ್ಲಿದೆ ಓದಿ. 

ಮುಂಬೈ (ಆ. 30): ಬಿಗ್ ಬಿ ಅಮಿತಾಬ್ ಬಚ್ಚನ್ ವಯಸ್ಸು 75 ದಾಟಿದರೂ ಬೇಡಿಕೆ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗಲೂ ಸಕ್ರಿಯರಾಗಿದ್ದಾರೆ. 

ಇತ್ತೀಚಿಗೆ ಒಂದು ಪತ್ರಿಕಾಗೋಷ್ಟಿಯಲ್ಲಿ  ಚಿತ್ರರಂಗದಲ್ಲಿ ಈಗ ಮುಂಚೂಣಿಯಲ್ಲಿರುವ ನಾಯಕಿಯರ ಬಗ್ಗೆ ಕೇಳಿದಾಗ, ನನಗೆ ಈಗಿನವರ ಜೊತೆ ಕೆಲಸ ಮಾಡಲು ಭಯ. ಈಗಿನ ಯುವ ನಟ-ನಟಿಯರು ತುಂಬಾ ಬ್ರಿಲಿಯಂಟ್. ಅಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಇವರೆಲ್ಲಾ ಅದ್ಭುತ ನಟರು. ಇವರ ಜೊತೆ ಕೆಲಸ ಮಾಡಲು ಭಯವಾಗುತ್ತದೆ. ನಮ್ಮನ್ನು ನಾವು ಅಪ್ ಡೇಟ್ ಮಾಡಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಈಗಿನವರು ಬೇಗ ಅಪ್ ಡೇಟ್ ಆಗಿರುತ್ತಾರೆ. ಆತ್ಮವಿಶ್ವಾಸದಿಂದ ಸೆಟ್ ಗೆ ಬರುತ್ತಾರೆ ಎನ್ನುತ್ತಾರೆ. 

ಬಿಗ್ ಬಿ ಏನು ಹೇಳಿದ್ದಾರೆ ಇಲ್ಲಿದೆ ನೋಡಿ ವಿಡಿಯೋ 

 

loader