2010ರಲ್ಲಿ ಟ್ವಿಟ್ಟರ್ ಖಾತೆ ತೆರೆದ ಬಚ್ಚನ್ ಚಿತ್ರ ಸಹಿತ ತಮ್ಮ ವಿಶೇಷ ಅನುಭವ, ಅಭಿಪ್ರಾಯಗಳನ್ನು ಟ್ವೀಟಿಸುವ ಮೂಲಕ ಅಭಿಮಾನಿಗಳಿಗೆ ಸಮೀಪವಾಗುತ್ತಿದ್ದರು.
ಮುಂಬೈ(ಡಿ.17): ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಟ್ವಿಟ್ಟರ್ ಖಾತೆಯ ಹಿಂಬಾಲಕರ ಸಂಖ್ಯೆ ಬರೋಬ್ಬರಿ 24 ಮಿಲಿಯನ್‌ಗೆ ಏರಿಕೆಯಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನಂತರ ಬಚ್ಚನ್ ಅವರು ಭಾರತದಲ್ಲಿಯೇ ಎರಡನೇ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸ್ಟಾರ್ ಆಗಿದ್ದಾರೆ.
74 ವರ್ಷದ ಹಿರಿಯ ನಟ ಅಮಿತಾಬ್ ಬಾಲಿವುಡ್ ಬಾದ್'ಷಹ ಶಾರುಖ್ ಖಾನ್ (22.6ಮಿಲಿಯನ್), ಸಲ್ಮಾನ್ ಖಾನ್ (20.7 ಮಿಲಿಯನ್), ಅಮೀರ್ ಖಾನ್(19.3 ಮಿಲಿಯನ್) ಸೇರಿದಂತೆ ಹಲವು ನಟರನ್ನು ಹಿಂದಿಕ್ಕಿದ್ದಾರೆ.
2010ರಲ್ಲಿ ಟ್ವಿಟ್ಟರ್ ಖಾತೆ ತೆರೆದ ಬಚ್ಚನ್ ಚಿತ್ರ ಸಹಿತ ತಮ್ಮ ವಿಶೇಷ ಅನುಭವ, ಅಭಿಪ್ರಾಯಗಳನ್ನು ಟ್ವೀಟಿಸುವ ಮೂಲಕ ಅಭಿಮಾನಿಗಳಿಗೆ ಸಮೀಪವಾಗುತ್ತಿದ್ದರು.
ಈ ಬಗ್ಗೆ ಅಮಿತಾಬ್ ಅವರು ‘‘ಟ್ವಿಟ್ಟರ್‌ನಲ್ಲಿ 24 ಮಿಲಿಯನ್! ಬಡುಂಬಾ’’ ಎಂದು ಟ್ವೀಟ್ ಮಾಡಿದ್ದಾರೆ.