ಮಿ.ಫರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಅಮಿರ್ ಖಾನ್ ಇಂದು 52 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘ಏಜ್ ಈಸ್ ಜಸ್ಟ್ ಎ ನಂಬರ್’ ಎಂದು ಹುಟ್ಟುಹಬ್ಬ ಆಚರಿಸಿಕೊಂಡ ಅಮಿರ್ ಖಾನ್ ನಾನಿನ್ನೂ ಯುವಕ ಎಂದು ಹೇಳಿಕೊಂಡಿದ್ದಾರೆ.
ನವದೆಹಲಿ (ಮಾ.14): ಮಿ.ಫರ್ಫೆಕ್ಷನಿಸ್ಟ್ ಎಂದೇ ಹೆಸರಾಗಿರುವ ಅಮಿರ್ ಖಾನ್ ಇಂದು 52 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ‘ಏಜ್ ಈಸ್ ಜಸ್ಟ್ ಎ ನಂಬರ್’ ಎಂದು ಹುಟ್ಟುಹಬ್ಬ ಆಚರಿಸಿಕೊಂಡ ಅಮಿರ್ ಖಾನ್ ನಾನಿನ್ನೂ ಯುವಕ ಎಂದು ಹೇಳಿಕೊಂಡಿದ್ದಾರೆ.
ನೀವು ಏನು ಯೋಚಿಸುತ್ತೀರಿ ಎಂಬುದು ಮುಖ್ಯ. ನೀವು ನಿಮ್ಮ ಜೀವನದಲ್ಲಿ ಖುಷಿಯಾಗಿದ್ದೀರಿ ಎಂದು ಭಾವಿಸಿದರೆ ವಯಸ್ಸು ವಿಚಾರವೇ ಅಲ್ಲ ಎಂದು ಅಮಿರ್ ಖಾನ್ ಹೇಳಿದ್ದಾರೆ.
ದಂಗಾಲ್ ನಲ್ಲಿ ಮಾಡಿದ ಪ್ರಯೋಗದಂತೆ ಮುಂಬರುವ ಚಿತ್ರಗಳಲ್ಲೂ ಮಾಡುತ್ತೀರಾ ಎನ್ನುವ ಪ್ರಶ್ನೆಗೆ, ನಟನಾಗಿ ಪಾತ್ರವನ್ನು ಅದಕ್ಕೆ ತಕ್ಕಂತೆ ಕಟ್ಟಿಕೊಡುವುದು ನನ್ನ ಜವಾಬ್ದಾರಿ. ನಾನೇನೇ ಮಾಡಿದರೂ ಅದು ಆ ಪಾತ್ರಕ್ಕೆ ಅಗತ್ಯವಿರುತ್ತದೆ. ಕೆಲವೊಮ್ಮೆ ಹೊಸ ಹೊಸ ಪ್ರಯೋಗ ಮಾಡುವುದು ನಮ್ಮ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಎಂದು ನನಗೆ ಗೊತ್ತು. ಆದರೆ ಅದರ ಬಗ್ಗೆ ನಾನು ಯೋಚಿಸುವುದಿಲ್ಲ. ಕೇವಲ ಪಾತ್ರದ ಬಗ್ಗೆ ಯೋಚಿಸುತ್ತೇನೆ ಎಂದು ಅಮಿರ್ ಖಾನ್ ಹೇಳಿದ್ದಾರೆ.
