ಕನ್ನಡ ಬೆಳ್ಳಿತೆರೆಯಲ್ಲಿ ಅಮೆರಿಕನ್ ಕ್ರೈಮ್ ಸ್ಟೋರಿ!
ಬಹುತೇಕ ಎನ್‌ಆರ್‌ಐ ಕನ್ನಡಿಗರೇ ಸೇರಿ ಮಾಡಿರುವ ‘ರತ್ನಮಂಜರಿ’ ಸಿನಿಮಾ ಮೇ.17ಕ್ಕೆ ತೆರೆಗೆ ಬರುತ್ತಿದೆ. ಸಾಕಷ್ಟುಕುತೂಹಲ ಮೂಡಿಸಿರುವ ಈ ಚಿತ್ರದ ಕಥೆ ಏನು ಎನ್ನುವುದಕ್ಕೆ ಇದೊಂದು ನೈಜ ಘಟನೆ ಎನ್ನುವ ಉತ್ತರ ಬರುತ್ತದೆ. ಆದರೆ, ಘಟನೆ ಯಾವುದು ಎಂಬುದು ಸದ್ಯದ ಕುತೂಹಲ.
ಇದೊಂದು ಜೋಡಿ ಕೊಲೆಯ ಪ್ರಕರಣದ ಸುತ್ತ ಸಾಗುವ ಕತೆ. ಆದರೆ, ಆ ಜೋಡಿ ಕೊಲೆ ನಡೆದಿರುವುದು ಅಮೆರಿಕದಲ್ಲಿ. ಅಲ್ಲಿ ನಡೆದ ಒಂದು ಕೊಲೆ ಮತ್ತು ಆ ನಂತರ ನಡೆದ ಬೆಳವಣಿಗೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಅಮೆರಿಕದ ಕ್ರೈಮ್ ಕತೆ ಕನ್ನಡಿಗರು ಯಾಕೆ ನೋಡಬೇಕು ಎಂಬುದಕ್ಕೆ ಸಿನಿಮಾ ನೋಡಿದಾಗ ಉತ್ತರ ಸಿಗುತ್ತದೆ ಎಂಬುದು ಚಿತ್ರತಂಡ ಹೇಳುವ ಮಾತು. ಹಾಗಾದರೆ ಇದು ಭಾರತೀಯ ಮೂಲದವರು ಅಮೆರಿಕದಲ್ಲಿ ಕೊಲೆಯಾದ ಕತೆಯೇ? ಎನ್ನುವುದಕ್ಕೆ ಸಿನಿಮಾ ನೋಡಿದ ಮೇಲೆ ಉತ್ತರ ಗೊತ್ತಾಗಲಿದೆ.
ಎನ್‌ಆರ್‌ಐ ಕನ್ನಡಿಗರ ಸಾಹಸ 'ರತ್ನಮಂಜರಿ'
ಪ್ರಸಿದ್ದ ಈ ಚಿತ್ರದ ನಿರ್ದೇಶಕರಾಗಿದ್ದು, ಚಿತ್ರರಂಗಕ್ಕೆ ಬರುವ ಮುನ್ನ ಯೂರೋಪ್‌ನಲ್ಲಿ ಇಂಜಿನಿಯರ್ ಆಗಿದ್ದವರು. ಇವರು ಕಂಡ ಪ್ರಕರಣವೊಂದನ್ನು ಸಿನಿಮಾ ಮಾಡಲು ಹೊರಟಾಗಿ ಇವರಿಗೆ ಜತೆಯಾಗಿದ್ದು, ಅಮೆರಿಕದ ಗೆಳೆಯರಾದ ನಟರಾಜ್ ಮತ್ತು ಸಂದೀಪ್. ‘ಕತೆಯೇ ಚಿತ್ರದ ಹೀರೋ. ಭಿನ್ನವಾದ ಚಿತ್ರಕತೆಯನ್ನು ವಿಶೇಷವಾಗಿ ಮೇಕಿಂಗ್ ಮಾಡಲಾಗಿದೆ. ಸಂಗೀತ ಕೂಡ ಪ್ರಮುಖ ಪಾತ್ರ ವಹಿಸಿದೆ. ಇದು ಮರ್ಡರ್ ಮಿಸ್ಟ್ರಿರಿ, ಹಾರರ್ ಮತ್ತು ಥ್ರಿಲ್ಲರ್ ಅನುಭವ ನೀಡುವ ಚಿತ್ರ. ಅಮೆರಿಕಾದಲ್ಲಿ 20 ದಿನ ಔಟ್‌ಡೋರ್ ಶೂಟಿಂಗ್ ಮಾಡಲಾಗಿದೆ. ಚಿತ್ರದಲ್ಲಿ ಅಮೆರಿಕದವರೂ ನಟಿಸಿದ್ದಾರೆ. ಒಂದು ಥ್ರಿಲ್ಲರ್‌ಮಾಡಬೇಕು ಎಂದುಕೊಂಡಾಗ ನೈಜ ಘಟನೆಯನ್ನಾಧರಿಸಿ ಚಿತ್ರ ಮಾಡಿದ್ರೆ ಚೆನ್ನಾಗಿರುತ್ತದೆ ಎನ್ನುವ ಯೋಚನೆ ಬಂತು. ಅಮೆರಿಕದಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಕುತೂಹಲಕಾರಿ ಎನಿಸಿತು. ಅದನ್ನು ಪೊಲೀಸರು ಹೇಗೆ ಬೇಧಿಸಿದರು ಎನ್ನುವುದು ಆಸಕ್ತಿಕರ. ಈ ಪ್ರಕರಣವನ್ನಿಟ್ಟುಕೊಂಡು ಒಂದೇ ವಾರದಲ್ಲಿ ಪ್ರಸಿದ್‌್ಧ ಕತೆ ಮಾಡಿದರು. ನಮಗೆ ಇಷ್ಟವಾಯ್ತು. ಹೀಗಾಗಿ ಸಿನಿಮಾ ಮಾಡಿದ್ವಿ’ ಎಂಬುದು ನಿರ್ಮಾಪಕರು ಹೇಳುವ ವಿವರಣೆ. ಚರಣ್ ರಾಜ್ ಮತ್ತು ಅಖಿಲಾ ಪ್ರಕಾಶ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಅರ್ಥಾತ್ ಇವರೇ ಚಿತ್ರದ ಜೋಡಿ.
ಒಂದು ತಿಂಗಳು ಅಮೆರಿಕಾದಲ್ಲಿದ್ದೆ: ಅಖಿಲಾ ಪ್ರಕಾಶ್