ಬೆಂಗಳೂರಿನಲ್ಲಿ ನಡೆದ 'ಉಪ್ಪು ಉಳಿ ಖಾರ' ಚಿತ್ರದ ಟ್ರೈಲರ್'ನಲ್ಲಿ ಭಾಗವಹಿಸಿ ನಟಿ ಮಾಲಾಶ್ರೀ ಹಾಗೂ ನಿರೂಪಕಿ ಅನುಶ್ರೀ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ

ಬೆಂಗಳೂರು(ನ.14): ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರದ ಕೊನೆಯ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಅದೇ ಪಕ್ಷವನ್ನು ಪ್ರತಿನಿಧಿಸುತ್ತಿರುವ ಕೆಲವು ವರ್ಷ ಸಚಿವರು ಆಗಿದ್ದ ನಟ ಕಮ್ ರಾಜಕಾರಣ ರೆಬಲ್ ಸ್ಟಾರ್ ಅಂಬರೀಶ್ ಕಳೆದ 5 ವರ್ಷಗಳಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದು, ಅತೀ ಕಡಿಮೆ ದಿನಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಸರ್ಕಾರದ ಕೊನೆಯ ಅಧಿವೇಶನ ನಡೆಯುತ್ತಿದೆ. ಈಗಲೇ ಶಾಸಕರು ಸಚಿವರಿಲ್ಲದೆ ಸಭೆ ಭಣಗುಡುತ್ತಿದೆ. ಹಿರಿಯ ರಾಜಕಾರಣಿಯಾಗಿರುವ ಅಂಬರೀಶ್ ಅವರು ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಬೆಂಗಳೂರಿನಲ್ಲಿ ನಡೆದ 'ಉಪ್ಪು ಉಳಿ ಖಾರ' ಚಿತ್ರದ ಟ್ರೈಲರ್'ನಲ್ಲಿ ಭಾಗವಹಿಸಿ ನಟಿ ಮಾಲಾಶ್ರೀ ಹಾಗೂ ನಿರೂಪಕಿ ಅನುಶ್ರೀ ಜೊತೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಂಬರೀಶ್ ಅವರ ನಡೆಗೆ ಅಭಿಮಾನಿಗಳು ಹಾಗೂ ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.