ರೆಬೆಲ್ ಸ್ಟಾರ್ ಅಂಬರೀಶ್ ಮಗ ಸ್ಯಾಂಡಲ್'ವುಡ್'ಗೆ ಬರುವುದಕ್ಕೆ ರೆಡಿಯಾಗಿದ್ದಾನೆ. ಈ ವಿಚಾರ ಸದ್ಯಕ್ಕೆ  ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.

ಬೆಂಗಳೂರು (ಸೆ.14): ರೆಬೆಲ್ ಸ್ಟಾರ್ ಅಂಬರೀಶ್ ಮಗ ಸ್ಯಾಂಡಲ್'ವುಡ್'ಗೆ ಬರುವುದಕ್ಕೆ ರೆಡಿಯಾಗಿದ್ದಾನೆ. ಈ ವಿಚಾರ ಸದ್ಯಕ್ಕೆ ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.

ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಸುಮಲತಾ ಅಂಬರೀಷ್ ಮುದ್ದಿನ ಮಗ ಅಭಿಷೇಕ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರುವ ಸೂಚನೆ ನೀಡಿದ್ದಾರೆ. ಅಭಿಷೇಕ್ ಹಲವು ದಿನಗಳಿಂದ ಸಿನಿಮಾ ಇಂಡಸ್ಟ್ರಿಗೆ ಬರ್ತಾರೆ ಅನ್ನೋ ಸುದ್ದಿ ಆಗಾಗ ಸ್ಯಾಂಡಲ್'ವುಡ್ ನಲ್ಲಿ ಕೇಳಿ ಬರುತ್ತಿತ್ತು. ಮತ್ತೊಂದೆಡೆ ಅಭಿಷೇಕ್ ರಾಜಕಾರಣಕ್ಕೆ ಬರ್ತಾರೆ ಎಂಬ ಸುದ್ದಿಯೂ ಕೇಳಿ ಬಂದಿತ್ತು. ಅಭಿಷೇಕ್ ಆಸೆಯಂತೆ ಅಂಬರೀಷ್ ಹಾಗೂ ಸುಮಲತಾ ಮಗನ ಆಸೆಗೆ ಓಕೆ ಎಂದಿದ್ದಾರೆ.

ಲಂಡನ್'ನಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿ ಬೆಂಗಳೂರಿನಲ್ಲಿರುವ ಅಭಿಷೇಕ್ ಈಗ, ಅಪ್ಪ ಅಮ್ಮನ ಹಾದಿಯಲ್ಲಿ ಸಾಗೋದಿಕ್ಕೆ ಮನಸು ಮಾಡಿದ್ದಾನೆ. ನಟನೆ ಕಲಿಯಲು ತರಬೇತಿ ಪಡೆಯುವುದಾಗಿ ಅಭಿಷೇಕ್ ಅಪ್ಪ, ಅಮ್ಮನ ಹತ್ತಿರ ಚರ್ಚಿಸಿದ್ದಾನಂತೆ. ಈ ಹಿಂದೆ ಸಿಕ್ಕಾಪಟ್ಟೇ ದಪ್ಪ ಇದ್ದ ಅಭಿಷೇಕ್, ವರ್ಕ್ ಔಟ್ ​, ಸ್ಟ್ರೀಟ್ ಡಯಟ್ ಅಂತಾ ಮಾಡಿ ಬರೋಬ್ಬರಿ 18ರಿಂದ 20 ಕೆಜಿ ತೂಕ ಇಳಿಸಿ ಸ್ಲಿಮ್ ಆಗಿದ್ದಾರೆ. ಇನ್ನು ಆ್ಯಕ್ಟಿಂಗ್ ಕೋರ್ಸ್​ , ಡ್ಯಾನಿಂಗ್ ಕಲಿಯುತ್ತಿದ್ದಾನೆ ಅಂತ ಸುಮಲತಾ ಮಗನ ಸಿನಿಮಾ ಎಂಟ್ರಿ ಬಗ್ಗೆ ಸುಳಿವು ನೀಡಿದ್ದಾರೆ.

ಇತ್ತೀಚೆಗೆ ತೆಲುಗಿನ ಖಾಸಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಸುಮಲತಾ ಅಂಬರೀಷ್ ಅಭಿಷೇಕ್ ಸಿನಿಮಾ ಪಾದಾರ್ಪಣೆ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಆ್ಯಕ್ಟಿಂಗ್ ಬಗ್ಗೆ ತಿಳಿದುಕೊಂಡು ಒಳ್ಳೆ ಸ್ಕ್ರಿಪ್ಟ್ ಬಂದರೆ ಸಿನಿಮಾ ಮಾಡಲಿ ಅಂತಾ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಹಾಗಾದ್ರೆ ಅಭಿಷೇಕ್ ಸಿನಿಮಾ ತಯಾರಿ ಹೇಗಿರುತ್ತೆ, ಯಾವ ಬ್ಯಾನರ್ ನಲ್ಲಿ ಲಾಂಚ್ ಆಗ್ತಾರೆ, ನಾಯಕಿ ಯಾರು ಆಗ್ತಾರೆ, ಯಾರು ಅಭಿಷೇಕ್ ಸಿನಿಮಾವನ್ನ ನಿರ್ಮಾಣ ಮಾಡ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.