ಬಾರಯ್ಯ ಅಂದ್ರೆ ಬರಬೇಕು ಅಂತ ದರ್ಶನ್’ಗೆ ಗದರಿದ್ದು ಯಾರು ಗೊತ್ತಾ?

First Published 23, Jun 2018, 12:52 PM IST
Ambarish fun on stage
Highlights

ಗಣ್ಯರು ವೇದಿಕೆ ಮೇಲೆ ಕೂತಿದ್ದರು. ಆಗ ದರ್ಶನ್ ಅವರನ್ನೂ ವೇದಿಕೆ ಮೇಲೆ ಆಹ್ವಾನಿಸಿದರು. ಆದರೆ ದರ್ಶನ್ ಬರಲಿಲ್ಲ. ಆಗ ‘ಎಲ್ಲಿದ್ದಿಯಾಪ್ಪ ಎದ್ ಬಾ...’ ಎಂದು ದೊಡ್ಡ ಧ್ವನಿ ಸದ್ದು ಮಾಡಿತು. 

ಗಣ್ಯರು ವೇದಿಕೆ ಮೇಲೆ ಕೂತಿದ್ದರು. ಆಗ ದರ್ಶನ್ ಅವರನ್ನೂ ವೇದಿಕೆ ಮೇಲೆ ಆಹ್ವಾನಿಸಿದರು. ಆದರೆ ದರ್ಶನ್ ಬರಲಿಲ್ಲ. ಆಗ ‘ಎಲ್ಲಿದ್ದಿಯಾಪ್ಪ ಎದ್ ಬಾ...’ ಎಂದು ದೊಡ್ಡ ಧ್ವನಿ ಸದ್ದು ಮಾಡಿತು. ಆ ಧ್ವನಿ ಅಂಬರೀಶ್ ಅವರದ್ದೇ. ಎದ್ದು ನಿಂತು ‘ಬೇಡ ಬೇಡ ಇಲ್ಲೇ ಕೂರುತ್ತೇನೆ’ ಎಂದರು ದರ್ಶನ್.

‘ಬಾರಯ್ಯ ಅಂದ್ರೆ ಬರಬೇಕ್...’ ಎಂದು ತಮ್ಮದೇ ಸ್ಟೈಲಿನಲ್ಲಿ ಗದರಿದರು. ತಕ್ಷಣ ದರ್ಶನ್ ವೇದಿಕೆ ಏರಿ ಬಂದರು. ಬಂದವರು ಮತ್ತೆ ವಾಪಸ್ಸು ಹೋಗುತ್ತೇನೆ ಎಂದಾಗ ‘ಸುಮ್ಮನೆ ಕುತ್ಕೋಬೇಕು. ಹೇಳಿದ್ ಮಾತು ಕೇಳು, ಅಷ್ಟೆ’ ಎಂದು ಮತ್ತೆ ಜೋರು ಮಾಡಿದರು. ದರ್ಶನ್ ಮತ್ತು ಅಂಬರೀಶ್ ಅವರ ಈ ಮಾತುಗಳನ್ನು ಕೇಳಿ ಇಡೀ ಸಭೆಯಲ್ಲಿ ನಗೆ. ಸ್ವತಃ ಕುಮಾರಸ್ವಾಮಿ ಕೂಡ ನಕ್ಕರು.  

loader