’ಎಲ್ಲರಿಗೂ 24 ಗಂಟೆಯಿದ್ರೆ ದೇವೇಗೌಡರಿಗೆ ಮಾತ್ರ ದೇವರು 25 ಗಂಟೆ ಕೊಟ್ಟಿದ್ದಾನೆ’

Ambarish admires Deve Gowda
Highlights

ನಮ್ಮ ಮಾಜಿ ಪ್ರಧಾನ ಮಂತ್ರಿಗಳು ಇದ್ದಾರಲ್ಲ ದೇವೇಗೌಡರು ಅವರು ಸಾಮಾನ್ಯ ವ್ಯಕ್ತಿಯಲ್ಲ. ಎಲ್ಲರಿಗೂ 24 ಗಂಟೆ ಇದ್ದರೆ. ದೇವೇಗೌಡರಿಗೆ ಮಾತ್ರ ಆ ದೇವರು 25 ಗಂಟೆ ಕೊಟ್ಟುಬಿಟ್ಟಿದ್ದಾರೆ. ಅವರು 25
ಗಂಟೆಯೂ ರಾಜಕಾರಣಿಯೇ. 

ನಮ್ಮ ಮಾಜಿ ಪ್ರಧಾನ ಮಂತ್ರಿಗಳು ಇದ್ದಾರಲ್ಲ ದೇವೇಗೌಡರು ಅವರು ಸಾಮಾನ್ಯ ವ್ಯಕ್ತಿಯಲ್ಲ. ಎಲ್ಲರಿಗೂ 24 ಗಂಟೆ ಇದ್ದರೆ. ದೇವೇಗೌಡರಿಗೆ ಮಾತ್ರ ಆ ದೇವರು 25 ಗಂಟೆ ಕೊಟ್ಟುಬಿಟ್ಟಿದ್ದಾರೆ. ಅವರು 25 ಗಂಟೆಯೂ ರಾಜಕಾರಣಿಯೇ.

ಬೆಳಿಗ್ಗೆ ಡೆಲ್ಲಿಯಲ್ಲಿರುತ್ತಾರೆ. ಮಧ್ಯಾಹ್ನ ಉತ್ತರ ಪ್ರದೇಶದ ಯಾರ ಜತೆಗೋ ಮಾತನಾಡುತ್ತಿರುತ್ತಾರೆ. ಕಾಶ್ಮೀರದಲ್ಲಿ ಕಾಣಿಸಿಕೊಳ್ಳುತ್ತಾರೆ. ದಿಢೀರ್ ಅಂತ ಕೇರಳದಲ್ಲಿರುತ್ತಾರೆ. ಇದ್ದಕ್ಕಿದ್ದಂತೆ ಮೋದಿ ಮುಂದೆ ಕೂತಿರುತ್ತಾರೆ. ಹೀಗೆ ಒಂದು ಗಂಟೆ ಹೆಚ್ಚುವರಿಯಾಗಿ ಪಡೆದುಕೊಂಡಿರುವ ದೇವೇ ಗೌಡರು 25 ಗಂಟೆ ರಾಜಕಾರಣಿ ಎಂದು ಅಂಬರೀಶ್ ಹೇಳಿದ್ದಾರೆ. 

loader