ಶೂಟಿಂಗ್ ಸ್ಪಾಟ್‌ನಿಂದ ಆಚೆ ಬಂದಿರುವ ಈ ಪೋಟೋಗಳನ್ನು ನೋಡಿದರೆ ಅಂಬರೀಶ್ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಅನುಮಾನವಿಲ್ಲದೆ ಹೇಳಬಹುದು. ಕಿಚ್ಚ ಸುದೀಪ್ ಅವರ ಬ್ಯಾನರ್‌ನಲ್ಲಿ ಜಾಕ್ ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರವಿದು

ರೆಬೆಲ್ ಸ್ಟಾರ್ ಅಂಬರೀಷ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ತುಂಬಾ ವರ್ಷಗಳ ನಂತರ ಅಂಬಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಹೇಗಿರುತ್ತದೆ? ಚಿತ್ರದಲ್ಲಿನ ಅವರ ಗೆಟಪ್‌ಗಳು ಹೇಗಿವೆ ಎಂಬುದು ಎಲ್ಲರಿಗೂ ಕಾಡುವ ಸಹಜ ಕುತೂಹಲ.

ಅದಕ್ಕೆ ಒಂದಿಷ್ಟು ಸ್ಯಾಂಪಲ್ ಇಲ್ಲಿದೆ. ಶೂಟಿಂಗ್ ಸ್ಪಾಟ್‌ನಿಂದ ಆಚೆ ಬಂದಿರುವ ಈ ಪೋಟೋಗಳನ್ನು ನೋಡಿದರೆ ಅಂಬರೀಶ್ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಅನುಮಾನವಿಲ್ಲದೆ ಹೇಳಬಹುದು. ಕಿಚ್ಚ ಸುದೀಪ್ ಅವರ ಬ್ಯಾನರ್‌ನಲ್ಲಿ ಜಾಕ್ ಮಂಜು ನಿರ್ಮಿಸಿ, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರವಿದು. ಅಚ್ಚರಿ ಎಂದರೆ ಇಲ್ಲಿ ಆದಿ ಲೋಕೇಶ್ ಸೋಫಾದಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ರಾಜನಂತೆ ಕೂತಿದ್ದರೆ ಅವರ ಹಿಂದೆ ಒಂದಿಷ್ಟು ಜೂನಿಯರ್ ಆರ್ಟಿಸ್ಟ್ಗಳು ನಿಂತಿದ್ದಾರೆ.

ಹಾಗೆ ಜೂನಿಯರ್ ಆರ್ಟಿಸ್ಟ್‌ಗಳಂತೆ ನಿಂತಿರುವವರಲ್ಲಿ ಅಂಬರೀಷ್ ಕೂಡ ಮುಗ್ಧನಂತೆ ನಿಂತಿದ್ದಾರೆ. ಈ ಫೋಟೋ ಒಂದೇ ಸಾಕು, ಅಂಬರೀಷ್ ಈ ಚಿತ್ರಕ್ಕಾಗಿ ಯಾವ ರೀತಿಯ ತಯಾರಾಗಿದ್ದಾರೆ ಎಂಬುದು ತಿಳಿಯಲು. ಸದ್ಯಕ್ಕೆ ಬೆಂಗಳೂರಿನ ಮಿನರ್ವ ಮಿಲ್, ಬನ್ನೇರುಘಟ್ಟ ಮುಂತಾದ ಕಡೆ ಚಿತ್ರೀಕರಣ ಸಾಗುತ್ತಿದೆ.