ಚೆನ್ನೈ(ಸೆ.26): ‘ನಾನು ಸಂಪೂರ್ಣ ಚೆನ್ನಾಗಿದ್ದೇನೆ. ಇನ್ನೆರಡು ದಿನದಲ್ಲಿ ಡಿಸ್‌ಚಾಜ್‌ರ್‍ ಆಗಿ ಮನೆಯಲ್ಲಿರುತ್ತೇನೆ’ ಎಂದು ಕಳೆದ ತಿಂಗಳು ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಒಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದರು. ಅದೇ ಅವರು ಸಾರ್ವಜನಿಕವಾಗಿ ಆಡಿದ ಕೊನೆಯ ಮಾತು. ಕೊರೋನಾ ಸೋಂಕು ತಗಲಿ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಎಸ್‌ಪಿಬಿ ಈ ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ, ಅವರ ಮಾತು ನಿಜವಾಗಲಿಲ್ಲ.

"

ಆ.5ರಂದು ಬಿಡುಗಡೆ ಮಾಡಿದ್ದ ಈ ವಿಡಿಯೋದಲ್ಲಿ ಎಸ್‌ಬಿಪಿ ‘ಸ್ವಲ್ಪ ಸಮಸ್ಯೆಯಿದೆ ಅಷ್ಟೆ. ಚೂರು ಎದೆನೋವು, ನೆಗಡಿ, ಬಂದು-ಹೋಗಿ ಮಾಡುವ ಜ್ವರವಿದೆ. ತುಂಬಾ ತುಂಬಾ ಸಣ್ಣ ಕೊರೋನಾ ಸೋಂಕಿದೆ. ಮನೆಯಲ್ಲೇ ಕ್ವಾರಂಟೈನ್‌ ಆಗಿ ಔಷಧಿ ತೆಗೆದುಕೊಳ್ಳಬಹುದು ಅಂತ ಡಾಕ್ಟರ್‌ ಹೇಳಿದ್ದಾರೆ. ಆದರೆ, ಮನೆಯವರಿಗೆ ಚಿಂತೆಯಾಗುತ್ತದೆ ಅಂತ ಆಸ್ಪತ್ರೆಗೆ ಅಡ್ಮಿಟ್‌ ಆಗಿದ್ದೇನೆ. ಎರಡು ದಿನದಲ್ಲಿ ಮನೆಗೆ ಹೋಗುತ್ತೇನೆ’ ಎಂದು ಹೇಳಿದ್ದರು.

ಆದರೆ, ನಂತರ ಕೊರೋನಾದಿಂದ ಗುಣಮುಖರಾದರೂ ಇತರ ಅನಾರೋಗ್ಯದಿಂದ ಅವರು ಚೇತರಿಸಿಕೊಳ್ಳಲಿಲ್ಲ. 52 ದಿನಗಳ ಆಸ್ಪತ್ರೆ ವಾಸ ಅವರನ್ನು ಗುಣಮುಖಗೊಳಿಸಲಿಲ್ಲ.

"