ಒಬ್ಬರಂತೆ ಮತ್ತೊಬ್ಬರು ಇರುವುದು ಸಾಮಾನ್ಯ. ಆದರೆ ದೊಡ್ಡ ದೊಡ್ಡ ತಾರೆಯರ ರೀತಿ ಸಾಮಾನ್ಯರು ಇದ್ದರೆ ಅವರು ಬಹು ಬೇಗನೇ ತಾರೆಯರ ಅಪರಾವತಾರ ಎಂಬಂತೆ ಬಿಂಬಿತರಾಗಿ ಬೆಳಕಿಗೆ ಬಂದು ಬಿಡುತ್ತಾರೆ. ಬಾಲಿವುಡ್‌ನ ದೊಡ್ಡ ಸ್ಟಾರ್‌ಗಳನ್ನು ಹೋಲುವವರು ಜೂನಿಯರ್‌ ಸಲ್ಮಾನ್‌, ಜೂನಿಯರ್‌ ಅಕ್ಷಯ್‌, ಜೂನಿಯರ್‌ ಶ್ರೀದೇವಿ, ಜೂನಿಯರ್‌ ಅನುಷ್ಕಾ ಎಂದೆಲ್ಲಾ ಹೇಳಿಕೊಂಡು, ಅವರಂತೆ ಅಭಿನಯ ಮಾಡುತ್ತಾ ಇದ್ದರು.

ಕುರೂಪಿಗೆ ಮರುಳಾದ್ರಾ ‘ರಾಣಿ ಅಮೃತಮತಿ’ ಹರಿಪ್ರಿಯಾ?

ಈಗ ಕತ್ರಿನಾ ಕೈಫ್‌ ಹೋಲುವ ಚೆಲುವೆಯೊಬ್ಬಳ ಪತ್ತೆಯಾಗಿದೆ. ಸೋಷಲ್‌ ಮೀಡಿಯಾ ಮೂಲಕ ಪತ್ತೆಯಾಗಿರುವ ಈ ಚೆಲುವೆಯ ಹೆಸರು ಅಲಿನಾ ರಾಯ್‌. ಥೇಟ್‌ ಕತ್ರಿನಾಳನ್ನೇ ಹೋಲುವ ಅಲಿನಾ ಕಣ್ಣೋಟ, ಹಾವ ಭಾವ, ನಡೆ ನುಡಿಯಲ್ಲೂ ಕತ್ರಿನಾಳನ್ನೇ ಹೋಲುತ್ತಿದ್ದಾರೆ. ಹಾಗಾಗಿ ಕತ್ರಿನಾಗೆ ಜ್ಯೂನಿಯರ್‌ ಒಬ್ಬಳು ಸಿಕ್ಕಂತಾಗಿದೆ.

ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

ಈ ಫೋಟೋಗಳ ಮೂಲಕ ಅಲಿನಾ ಮತ್ತು ಕತ್ರಿನಾ ರೂಪ ಸಾಮ್ಯತೆ ನೋಡಿಬಿಡಿ.