ಸಮಾಜದಲ್ಲಿ ಅತ್ಯಂತ ನಿಷ್ಕೃಷ್ಟವಾಗಿ ಕಾಣುವ ಲೈಂ*ಗಿಕ ಕಾರ್ಯಕರ್ತೆಯರ ಲೋಕಕ್ಕೆ ಹೋಗಿ ವಿಭಿನ್ನ ಚಿತ್ರಣ ಕಟ್ಟಿಕೊಟ್ಟ ಬಾಲಿವುಡ್​ನ ಖ್ಯಾತ ನಟಿಯರು ಇವರೇ ನೋಡಿ...

ಬಹುತೇಕ ಎಲ್ಲರೂ ಅಸಡ್ಡೆಯಿಂದ ಕಾಣುವ, ಸಮಾಜದ ಕಣ್ಣಿನ ಕೆಂಗಣ್ಣಿಗೆ ಗುರಿಯಾಗಿರುವ ವೃತ್ತಿಯೆಂದರೆ ವೇ*ಶ್ಯಾ ವೃತ್ತಿ. ಇದೇ ವೃತ್ತಿಯನ್ನು ಹೈಟೆಕ್ ರೂಪದಲ್ಲಿ ಮಾಡುವವರ ಕೋಣೆಗೆ ಪ್ರವೇಶಿಸುವ 'ದೊಡ್ಡವರು' ಎನ್ನಿಸಿಕೊಂಡವರಿಗೇನೂ ಕಮ್ಮಿ ಇಲ್ಲ. ಅವರ ಗ್ರಹಚಾರ ಕೆಟ್ಟಾಗಷ್ಟೇ ಇವುಗಳು ಸುದ್ದಿಯಾಗುವುದು ಇದೆ. ಮನೆಯಲ್ಲಿ ಒಂದು, ಹೊರಗಡೆ ಒಂದು ಎಂದುಕೊಂಡು ಸಂಬಂಧ ಬೆಳೆಸುವವರೂ ಸಾಕಷ್ಟು ಮಂದಿ ಇದ್ದಾರೆ. ಅವುಗಳಲ್ಲಿ ಹಲವರು ಏನೇನೋ ಕಾರಣ ನೀಡಿ ಹೋಗುವುದು ವೇ*ಶ್ಯೆಯರ ಮನೆಗೇನೆ. ಇದೇ ಕಾರಣಕ್ಕೆ ಈ ವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕೆಂಬ ಹೋರಾಟ ಹಲವೆಡೆಗಳಲ್ಲಿ ನಡೆಯುತ್ತಲೇ ಇದೆ. ಇದು ಒಂದೆಡೆಯಾದರೆ, ಯಾವುದ್ಯಾವುದೋ ಕಾರಣಗಳಿಂದ ಈ ವೃತ್ತಿಗೆ ನೂಕಲ್ಪಟ್ಟಿರುವ ಹೆಣ್ಣುಗಳ ರೋದನೆ ಮಾತ್ರ ಹೊರಗಡೆ ಬರುವುದೇ ಇಲ್ಲ. ಇಲ್ಲಿ ಸ್ವಯಂ ಇಚ್ಛೆಯಿಂದ ಹೋದ ಮಹಿಳೆಯರಿಗಿಂತಲೂ ಹೆಚ್ಚಾಗಿ ಗೊತ್ತಿಲ್ಲದೇ ಈ ಕಗ್ಗತ್ತಲನ್ನು ಪ್ರವೇಶಿಸಿರುವ ದೊಡ್ಡ ವರ್ಗವೇ ಇದೆ. ಇಂಥ ಲೈಂಗಿಕ ಕಾರ್ಯಕರ್ತೆಯರ ನೋವುಗಳೇನು? ಅವರು ಈ ವೃತ್ತಿ ಆರಿಸಲು ಕಾರಣವೇನು, ಅವರಿಗೆ ಎದುರಾದ ಅನಿವಾರ್ಯತೆಯೇನು ಎಂಬ ಬಗ್ಗೆ ಯೋಚಿಸುವವರು ಬಹಳ ಕಮ್ಮಿ. ಈ ವೃತ್ತಿಯ ಬಗ್ಗೆ ಇರುವ ಹಲವು ಆಯಾಮಗಳು, ಹೆಣ್ಣುಮಕ್ಕಳ ಅಸಹಾಯಕತೆ ಇತ್ಯಾದಿಗಳನ್ನು ಚಿತ್ರದ ಮೇಲೆ ತರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಈ ವೃತ್ತಿಯ ಪಾತ್ರ ಮಾಡುವಾಗಲೂ ಪ್ರಬುದ್ಧ ನಟನೆಯ ಅಗತ್ಯವಿದೆ. ವೇ*ಶ್ಯೆ ಯರಾಗುವ ಹೆಣ್ಣುಮಕ್ಕಳ ನೋವಿನ ಕಥೆಗಳನ್ನು ಜಗತ್ತಿನ ಮುಂದೆ ಬಿಚ್ಚಿಡಲು ವೇಶ್ಯಾಪಾತ್ರ (Prostitution) ಮಾಡುವ ಮೂಲಕ ಸಕತ್​ ಫೇಮಸ್​ ಆಗಿದ್ದಾರೆ ಬಾಲಿವುಡ್​ನ ಖ್ಯಾತ 10 ನಟಿಯರು. ಅಂಥ ಕೆಲವು ನಟಿಯರ ಪರಿಚಯ ಇಲ್ಲಿದೆ.

ಕಳೆದ ವರ್ಷ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ಚಿತ್ರ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಾಥಿವಾಡಿ ಇಡೀ ವಿಶ್ವದ ಗಮನ ಸೆಳೆದ ಈ ಚಲನಚಿತ್ರವು ಜಗತ್ತಿನಾದ್ಯಂತ ದಾಖಲೆಗಳನ್ನು ಮುರಿದು ವರ್ಷದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬ್ಲಾಕ್‌ಬಸ್ಟರ್ ಹಿಟ್‌ ಚಿತ್ರ ಎಂದೂ ಹೆಸರು ಗಳಿಸಿತು. ಈ ಚಿತ್ರದಲ್ಲಿ ವೇ*ಶ್ಯೆ ಯರನ್ನು ಸಮಾಜ ಕೀಳಾಗಿ ಕಾಣಬಾರದು, ಅವರು ಕೂಡ ಸಮಾಜದ ಒಂದು ಭಾಗ ಎಂಬುದು ಚಿತ್ರದ ಹೂರಣ. ಲೈಂಗಿಕ ಕಾರ್ಯಕರ್ತೆಯರ ಹೋರಾಟಗಳ ಬಗ್ಗೆಯೂ ಚಿತ್ರದಲ್ಲಿ ಮನೋಜ್ಞವಾಗಿ ತಿಳಿಸಲಾಗಿದೆ. ಈ ಚಲನಚಿತ್ರವು ಗಂಗೂಬಾಯಿ ಕೊಥೆವಾಲಿ ಎಂದು ಜನಪ್ರಿಯವಾಗಿರುವ ಗಂಗಾ ಜಗಜೀವಂದಾಸ್ ಕಥಿವಾಡಿ ಅವರ ನೈಜ ಕಥೆಯನ್ನು ಆಧರಿಸಿದೆ. ಅವರ ಜೀವನವನ್ನು ಎಸ್. ಹುಸೇನ್ ಜೈದಿ ಬರೆದ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕದಲ್ಲಿ ದಾಖಲಿಸಲಾಗಿದೆ. ಪುಸ್ತಕವು ಮುಂಬೈನ ಭೂಗತ ಜಗತ್ತಿನ ಭಾಗವಾಗಿದ್ದ ಮಹಿಳೆಯರ ಕಥೆಗಳ ಸಂಗ್ರಹವಾಗಿದೆ. ಮುಂಬೈನ ರೆಡ್ ಲೈಟ್ ಜಿಲ್ಲೆಯ ಕಾಮಾಟಿಪುರದ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾದ ಗಂಗೂಬಾಯಿ ಕಥಿಯಾವಾಡಿ ಆ ಪ್ರದೇಶದಲ್ಲಿ ಅನೇಕ ವೇಶ್ಯಾಗೃಹಗಳ ಮಾಲೀಕರಾಗಿದ್ದರು.

ಕರೀನಾ ಕಪೂರ್​ ಖಾನ್​

ಇನ್ನು 2004ರಲ್ಲಿ ಬಿಡುಗಡೆಯಾದ ಚಮೇಲಿ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಕರೀನಾ ಕಪೂರ್ ಮತ್ತು ರಾಹುಲ್ ಬೋಸ್ ನಟಿಸಿದ ಚಮೇಲಿ ಚಿತ್ರವು ಲೈಂಗಿಕ ಕಾರ್ಯಕರ್ತರ ಜೀವನಕ್ಕೆ ಮಾನವೀಯ ಸ್ಪರ್ಶವನ್ನು ನೀಡುವಲ್ಲಿ ಯಶಸ್ವಿಯಾಯಿತು. ಚಲನಚಿತ್ರವು ಪುರುಷರು ಹೇಗೆ ಮಹಿಳೆಯರನ್ನು ಈ ವೃತ್ತಿಗೆ ನೂಕುತ್ತಿದ್ದಾರೆ. ಇದಕ್ಕೆ ಬಲಿಯಾಗು ಸ್ತ್ರೀ ಸಮೂಹ ಲೈಂಗಿಕ ಕಾರ್ಯಕರ್ತರೆಯರನ್ನು ಹೇಗೆ "ಅಶುದ್ಧ" ಮತ್ತು "ಅಸಮಾಧಾನ"ದಿಂದ ನೋಡುತ್ತದೆ, ಅವರನ್ನು ಮನುಷ್ಯದ ಬದಲು ಸರಕುಗಳಂತೆ ಹೇಗೆ ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ವಿಷದವಾಗಿ ತಿಳಿಸಲಾಗಿದೆ. ಇದು ಕೂಡ ಸಾಕಷ್ಟು ಜನಮನ್ನಣೆ ಗಳಿಸಿತ್ತು. ಕರೀನಾ ಕಪೂರ್ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ.

ವಿದ್ಯಾ ಬಾಲನ್​

2015 ರ ಬಂಗಾಳಿ ಚಲನಚಿತ್ರ ರಾಜಕಹಿನಿಯ ಹಿಂದಿ ರೀಮೇಕ್​ ಚಿತ್ರ ಬೇಗಂ ಜಾನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಬರೆದು ನಿರ್ದೇಶಿಸಿದ, ಈ ಚಿತ್ರ 2017ರಲ್ಲಿ ಬಿಡುಗಡೆಗೊಂಡಿದೆ. ಬೇಗಂ ಜಾನ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರವಾಗಿ ಖ್ಯಾತಿ ಗಳಿಸಿತು. ಈ ಚಿತ್ರದಲ್ಲಿ ವಿದ್ಯಾ ಬಾಲನ್ ವೇಶ್ಯಾಗೃಹದ ಮೇಡಂ ಪಾತ್ರದಲ್ಲಿ ಅಭಿಮಾನಿಗಳ ಮನಸೂರೆಗೊಂಡರು. ಇದರಲ್ಲಿ 1948 ರ ಭಾರತೀಯ ಸ್ವಾತಂತ್ರ್ಯದ ಅಂತಿಮ ವರ್ಷಗಳಲ್ಲಿ ಲೈಂಗಿಕ ಕಾರ್ಯಕರ್ತರ ಜೀವನ ಚರಿತ್ರೆ ಹೇಗಿತ್ತು ಎಂಬ ಬಗ್ಗೆ ತಿಳಿಸಲಾಗಿದೆ.

ಪ್ರೀತಿ ಜಿಂಟಾ, ಕಲ್ಕಿ ಕೊಚ್ಲಿನ್, ಮನೀಷಾ ಕೊಯಿರಾಲಾ

2001ರಲ್ಲಿ ಬಿಡುಗಡೆಗೊಂಡ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರದಲ್ಲಿ ನಟಿ ಪ್ರೀತಿ ಜಿಂಟಾ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಿದ್ದರೆ, 2009ರಲ್ಲಿ ಬಿಡುಗಡೆಗೊಂಡ ದೇವ್​ ಡಿನಲ್ಲಿ ಖ್ಯಾತ ನಟಿ ಕಲ್ಕಿ ಕೊಚ್ಲಿನ್ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2003ರಲ್ಲಿ ಬಿಡುಗಡೆಗೊಂಡ ಮಾರ್ಕೆಟ್​ ಚಿತ್ರದಲ್ಲಿ ನಟಿ ಮನೀಷಾ ಕೊಯಿರಾಲಾ ವೇ*ಶ್ಯೆ ಪಾತ್ರದಲ್ಲಿ ಎಲ್ಲರ ಮನ ಗೆದ್ದವರು.