ಆಲಿಯಾ ಭಟ್ ಮತ್ತೆ ಗರ್ಭಿಣಿ ಎಂಬ ವದಂತಿಗಳು ಹರಿದಾಡುತ್ತಿವೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅವರ ಉಡುಗೆ ಮತ್ತು ನೋಟ ಇದಕ್ಕೆ ಕಾರಣ. ಏನಿದು ವಿಷ್ಯ? 

ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ಮದುವೆಗಿಂತಲೂ ಮುಂಚೆಯೇ ಗರ್ಭಿಣಿಯಾಗಿದ್ದು ಬಹಿರಂಗ ಗುಟ್ಟಾಗಿದೆ. ಈಕೆ ಮತ್ತು ರಣಬೀರ್ ಕಪೂರ್ ಮದುವೆಯಾದ ಆರು ತಿಂಗಳಿಗೆ ದಂಪತಿಗೆ ರಿಯಾ ಹುಟ್ಟಿದ್ದಾಳೆ. ಆದರೆ ಇದೀಗ, ದಂಪತಿ ಮತ್ತೊಂದು ಮಗುವನ್ನು ಮಾಡಿಕೊಳ್ಳುವ ಸಿದ್ಧತೆ ನಡೆಸಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಕಾನ್ಸ್​ ಚಲನಚಿತ್ರೋತ್ಸವ. ಆಲಿಯಾ ಭಟ್ ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವ 2025 ರಲ್ಲಿ ತಮ್ಮ ಪದಾರ್ಪಣೆ ಮಾಡಿದರು. ಈ ಸಮಯದಲ್ಲಿ, ಅವರ ಸ್ಟೈಲಿಶ್ ಶೈಲಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮೊದಲು ಅವರು ಶಿಯಾಪರೆಲ್ಲಿ ಗೌನ್ ಧರಿಸಿದ್ದರು, ನಂತರ ಲೋರಿಯಲ್ ಪ್ಯಾರಿಸ್ 'ಲೈಟ್ಸ್ ಆನ್ ವುಮೆನ್ಸ್ ವರ್ತ್' ಕಾರ್ಯಕ್ರಮಕ್ಕಾಗಿ ಅರ್ಮಾನಿ ಪ್ರೈವ್ ಉಡುಪನ್ನು ಧರಿಸಿದ್ದರು. ಆದಾಗ್ಯೂ, ಈ ಗ್ಲಾಮರಸ್ ಲುಕ್‌ಗಳ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಂದು ಚರ್ಚೆ ಪ್ರಾರಂಭವಾಯಿತು. ಅದೇ ಆಲಿಯಾ ಮತ್ತೆ ಗರ್ಭಿಣಿ ಎನ್ನುವ ಸುದ್ದಿ.

ನಟಿಯ ಹೊಟ್ಟೆ ನೋಡಿ ಮತ್ತು ಅವರ ಮುಖದ ಕಾಂತಿ ನೋಡಿದ ನಂತರ ರೆಡ್ಡಿಟ್‌ನಿಂದ ಇನ್‌ಸ್ಟಾಗ್ರಾಮ್‌ವರೆಗೆ ಅನೇಕ ಜನರು ಈ ಪ್ರಶ್ನೆಗಳನ್ನು ಎತ್ತಿದ್ದಾರೆ. ಇತ್ತೀಚೆಗೆ, ಆಲಿಯಾ ಭಟ್ ಜೇ ಶೆಟ್ಟಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡರು. ಆಗಲೂ ಅವರು ರಾಹಾ ಹೆಸರಿನ ಹಿಂದಿನ ಕಥೆಯನ್ನು ಹೇಳಿದರು. ಅವರು ಗಂಡು ಮಗುವಿಗೆ ಹೆಸರಿಡುವ ಬಗ್ಗೆ ಯೋಚಿಸಿದ್ದಾರೆ ಮತ್ತು ಎರಡನೇ ಮಗು ಗಂಡು ಮಗುವಾಗಿದ್ದರೆ, ಅವರಿಗೆ ಅದೇ ಹೆಸರನ್ನು ಇಡುವುದಾಗಿ ಬಹಿರಂಗಪಡಿಸಿದ್ದರು. ಇದರಿಂದಾಗಿ ಆಗಲೇ ಹಲವರು ಶೀಘ್ರದಲ್ಲಿಯೇ ಎರಡನೆಯ ಮಗುವಿನ ಬಗ್ಗೆ ದಂಪತಿ ಯೋಚಿಸುತ್ತಿದ್ದಾರೆ ಎಂದಿದ್ದರು. ಮೊದಲ ಬಾರಿ ಗರ್ಭಧರಿಸಿದಾಗ ಹೆಸರು ಹುಡುಕುತ್ತಿದ್ದ ಸಂದರ್ಭದಲ್ಲಿ, ನಮಗೆ ಒಂದು ಗಂಡು ಮಗುವಿನ ಹೆಸರು ತುಂಬಾ ಇಷ್ಟವಾಗಿತ್ತು. ಹೆಸರು ತುಂಬಾ ಚೆನ್ನಾಗಿತ್ತು. ಆದರೆ ಹೆಸರು ರಿವೀಲ್​ ಮಾಡಲ್ಲ ಎಂದಿದ್ದರು. ಆದರೆ ಮಗಳು ಹುಟ್ಟಿದ್ದರಿಂದ ಬೇರೆ ಹೆಸರು ಇಟ್ಟಿದ್ದನ್ನು ಹೇಳಿದ್ದರು. ರಾಹಾ ಹೆಸರು ಇಡುವಾಗಲೂ ಇಬ್ಬರ ಕುಟುಂಬದಲ್ಲಿ ಸಾಕಷ್ಟು ಚರ್ಚೆಯಾಗಿತ್ತು ಎಂದೂ ಹೇಳಿದ್ದರು. ಇದೀಗ ನಿಜ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲದೇ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಇಬ್ಬರೂ ಎರಡನೇ ಮಗುವಿನ ಬಯಕೆಯನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. 2024 ರಲ್ಲಿ ಐಎಮ್‌ಡಿಬಿಯ 'ಐಕಾನ್ಸ್ ಓನ್ಲಿ' ವಿಭಾಗದಲ್ಲಿ ಮಾತನಾಡಿದ್ದ ಆಲಿಯಾ, 'ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ ಇನ್ನೂ ಅನೇಕ ಚಲನಚಿತ್ರಗಳು ಬರಲಿ ಎಂದು ಆಶಿಸುತ್ತೇನೆ. ಜೊತೆಗೆ ಮಕ್ಕಳ ಬಗ್ಗೆಯೂ ಯೋಚಿಸುತ್ತೇನೆ ಎಂದಿದ್ದರು. ಏತನ್ಮಧ್ಯೆ, ಮಾಷಬಲ್ ಜೊತೆಗಿನ ಚಾಟ್‌ನಲ್ಲಿ, ರಣಬೀರ್ ಕಪೂರ್ ತಮ್ಮ ಬಗ್ಗೆ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಶೀಘ್ರದಲ್ಲಿಯೇ ಮಗು ಆಗಲೆಂದು ಆಶಿಸುತ್ತೇನೆ ಎಂದಿದ್ದರು.

ಆದಾಗ್ಯೂ, ಈಗಿನಂತೆ ಇವೆಲ್ಲವೂ ಕೇವಲ ಊಹಾಪೋಹಗಳಾಗಿವೆ. ಆಲಿಯಾ ಅವರಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಪ್ರಸ್ತುತ, ಅವರು ತಮ್ಮ ಕಾನ್ಸ್​ನಲ್ಲಿ ಚೊಚ್ಚಲ ಪ್ರವೇಶವನ್ನು ಆನಂದಿಸುತ್ತಿದ್ದಾರೆ, ಆದರೆ ರಣಬೀರ್ ಕಪೂರ್ ಸಂಜಯ್ ಲೀಲಾ ಬನ್ಸಾಲಿ ಅವರ ಲವ್ ಅಂಡ್ ವಾರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

View post on Instagram