ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್ ನನ್ನು ಬಹಳ ಮೆಚ್ಚಿಕೊಂಡಿದ್ದಾರೆ. 

ಚಿತ್ರರಂಗದಲ್ಲಿ ಗಾಸಿಪ್ಪುಗಳು ಆಗಾಗ ಹುಟ್ಟಿಕೊಳ್ಳುತ್ತವೆ. ಕೆಲವು ಸ್ಟ್ರಾಂಗು ಆಗುತ್ತವೆ. ಮತ್ತೆ ಕೆಲವು ಅಲ್ಲಲ್ಲೇ ಬಿದ್ದು ಹೋಗುತ್ತವೆ. ಆದರೆ ಈಗೀಗ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಸಂಬಂಧದ ಕುರಿತಂತೆ ಹಬ್ಬಿರುವ ಗಾಸಿಪ್ಪು ನಿಜವಾಗುವ ಲಕ್ಷಣ ಗೋಚರಿಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯಕ್ಕೆ ಅಯನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಚಿತ್ರದ ಚಿತ್ರೀಕರಣಕ್ಕಾಗಿ ರಣಬೀರ್, ಅಲಿಯಾ ಇಬ್ಬರೂ ಬೆಲ್‌ಗ್ರೇಡ್‌ನಲ್ಲಿದ್ದಾರೆ. ಸಂದರ್ಭ ಹೀಗಿರುವಾಗ ಮಬ್ಬು ಕವಿದ ಕಂಜೆಯಲ್ಲಿ ಅಯನ್, ರಣಬೀರ್, ಅಲಿಯಾ ಜೊತೆಯಾಗಿ ಒಂದು ಫೋಟೋ ತೆಗೆದು ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ತಡ ಅಭಿಮಾನಿಗಳೆಲ್ಲಾ ಖುಷ್. ಅದಕ್ಕೆ ತಕ್ಕಂತೆ ಅಲಿಯಾ ಭಟ್ ತಾಯಿ ಸೋನಿಯಾ ರಾಜ್ದಾನ್ ಅವರಿಬ್ಬರ ಸಂಬಂಧದ ಕುರಿತಾಗಿ ಮಾತನಾಡುತ್ತಾ ರಣಬೀರ್ ಕಪೂರ್‌ನನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಲವ್ಲೀ ಲವ್ಲೀ ಬಾಯ್ ರಣಬೀರ್ ಎಂದು ಕರೆದಿದ್ದಾರೆ. ಇತ್ತೀಚೆಗೆ ರಿಶಿ ಕಪೂರ್ ನಮ್ಮ ಕುಟುಂಬಕ್ಕೆ ಅಲಿಯಾ ಅಂದ್ರೆ ಇಷ್ಟ ಎಂದಿದ್ದರು. ಹಾಗಾಗಿ ಬಾಲಿವುಡ್ ಪ್ರಖ್ಯಾತ ನಟ, ನಟಿ ಜೋಡಿಯಾಗುವ ಕಾಲ ಬಹುಶಃ ದೂರವಿಲ್ಲ