ಕನ್ನಡ ಚಿತ್ರರಂಗದಲ್ಲೇ ಬ್ಲಾಕ್ ಬಸ್ಟರ್ ಸಿನಿಮಾ ಆಗಬೇಕಿದ್ದ ‘ಮಾಸ್ತಿಗುಡಿ’ ಶೂಟಿಂಗ್‌ ವೇಳೆ ನಡೆದ ಅವಘಡದಿಂದ ಚಿತ್ರವೇ ಮಗುಚಿಕೊಂಡು ಬಿತ್ತು. ಘಟನೆ ನಡೆದು ಸುಮಾರು ಮೂರು ವರ್ಷ ಆದರೂ ಸಾವಿಗೆ ನ್ಯಾಯವೂ ಸಿಗದೇ ಪರಿಹಾರವೂ ಸಿಗದೇ ವಿಚಾರ ಅಲ್ಲಿಗೆ ನಿಂತಿತ್ತು.

ಪಾರ್ಕಿಂಗ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಟನೊಬ್ಬನಿಂದ ಮಾರಣಾಂತಿಕ ಹಲ್ಲೆ

 

2017 ನವೆಂಬರ್ 17 ರಂದು ತಿಪ್ಪಗೊಂಡನಹಳ್ಳಿಯಲ್ಲಿ ನಡೆಯುತ್ತಿದ್ದ ಕ್ಲೈಮ್ಯಾಕ್ಸ್ ಸೀನ್ ವೇಳೆ (ಹೆಲಿಕಾಪ್ಟರ್ ನಿಂದ ನೀರಿಗೆ ಜಿಗಿಯುವ ಸನ್ನಿವೇಶವಿದ್ದು) ಯಾವುದೇ ಲೈಫ್‌ ಜಾಕೆಟ್‌ ಬಳಸದೇ ಸಾಹಸಕ್ಕೆ ಮುಂದಾಗಿದ್ದೇ ದುರಂತಕ್ಕೆ ಕಾರಣವಾಯಿತು. ಇವರೊಂದಿಗಿದ್ದ ನಟ ದುನಿಯ ವಿಜಯ್ ಪ್ರಾಣಾಪಾಯದಿಂದ ಪಾರಾದರು.

ಪ್ರೀತಿ ನಿರಾಕರಿಸಿದ ಸ್ನೇಹಿತ: ಗಂಡ-ಮಕ್ಕಳನ್ನು ನೋಡದೇ ಆತ್ಮಹತ್ಯೆಗೆ ಶರಣಾದ ಹುಚ್ಚು ಹೆಣ್ಮಗಳು

ಈ ದುರಂತವನ್ನು ನೆನೆದು ಅಂತರಾಷ್ಟ್ರೀಯ ವಾಹಿನಿ ಅಲ್ ಜಜೀರಾ ಇದರ ಬಗ್ಗೆ ' ದಿ ಸ್ಟಂಟ್ ಮ್ಯಾನ್ ಆಫ್ ಬಾಲಿವುಡ್‌' ಎಂಬ ಕಾರ್ಯಕರ್ಮದಲ್ಲಿ ಪ್ರಸಾರ ಮಾಡಿತ್ತು. ಕೆಲ ತಿಂಗಳ ಹಿಂದೆ ಅಲ್ ಜಜೀರಾ ತಂಡವು ಬೆಂಗಳೂರಿನ ಅನಿಲ್ ನಿವಾಸಕ್ಕೆ ಭೇಟಿ ನೀಡಿದ್ದು ಅವರ ತಾಯಿ ಹಾಗೂ ಸಹೋದರ ಬಾಲಾಜಿ ಅವರನ್ನು ಮಾತನಾಡಿಸಿದೆ.