ಚಿಕ್ಕಬಳ್ಳಾಪುರ, [ಸೆ.28]: ಸ್ಮ್ಯೂಲ್ ಸಿಂಗಿಂಗ್ ಆ್ಯಪ್‌ನಲ್ಲಿ ತನ್ನ ಜತೆ ಹಾಡು ಹಾಡುತ್ತಿದ್ದ ಸಹ ಸಿಂಗರ್ ಪ್ರೀತಿಗೆ ನಿರಾಕರಿಸಿದ ಎಂದು ಮನನೊಂದು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು [ಶನಿವಾರ] ಚಿಕ್ಕಬಳ್ಳಾಪುರ ನಗರದ 16 ನೇ ವಾರ್ಡ್ ನಲ್ಲಿ ಮಡೆದಿದೆ.

ಶಿಲ್ಪಾ (30) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.  ಇಬ್ಬರು ಮಕ್ಕಳು ಹಾಗೂ ಗಂಡನನ್ನು ಬಿಟ್ಟು ನೇಣಿಗೆ ಶರಣಾಗಿದ್ದಾಳೆ. ಸ್ಮ್ಯೂಲ್ ಸಿಂಗಿಂಗ್ ಆ್ಯಪ್  ಮೂಲಕ ಹಲವರೊಂದಿಗೆ ಸಿಂಗಿಂಗ್ ಆ್ಯಪ್‌ ಮೂಲಕ ಹಾಡು ಕೂಡ ಹಾಡುತ್ತಿದ್ದಳು. 

ಅದೇ ಆ್ಯಪ್‌ನಲ್ಲಿ ಹಾಸನ ಮೂಲದ ಯುವಕನ ಜತೆ ಸ್ನೇಹ ಬೆಳೆಸಿದ್ದು, ಬಳಿಕ ಲವ್ ಮಾಡುತ್ತಿದ್ದಳು.  ಹೀಗೆ ಶುಕ್ರವಾರ ತಡರಾತ್ರಿ ಶಿಲ್ಪಾ, ಯುವಕನಿಗೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಕರೆ ಮಾಡಿದ್ದಾಗ ಆತ ಕರೆ ಸ್ವೀಕರಿಸಿಲ್ಲ. ಕೊನೆಗೆ ತನ್ನನ್ನು ನೀನು ದೂರ ಮಾಡುತ್ತಿದ್ದೀಯಾ ಎಂದು ಮೆಸೇಜ್ ಮಾಡಿದ್ದಾಳೆ. 

 ಚಾಟಿಂಗ್ ಮಾಡುತ್ತಿದ್ದಾಗಲೇ ಶಿಲ್ಪಾ ಸಾಯುವುದಾಗಿ ಹೇಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಊರಿಗೆ ಹೋಗಿದ್ದ ಶಿಲ್ಪಾ ಪತಿ ಶಿವಾನಂದ್ ಬೆಳಗ್ಗೆ ಪತ್ನಿಗೆ ಕರೆ ಮಾಡಿದ್ದಾರೆ. ಪತ್ನಿ ಕರೆ ಸ್ವೀಕರಿಸದಿದ್ದಕ್ಕೆ ಅನುಮಾನಗೊಂಡ ಪತಿ ಮನೆ ಮಾಲೀಕನಿಗೆ ವಿಷಯ ತಿಳಿಸಿದ್ದಾರೆ.

ಮಾಲೀಕ ಮನೆಯ ಬಾಗಿಲು ಒಡೆದು ನೋಡಿದ್ದಾಗ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಮನೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.