ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮಾಡುತ್ತಿರುವ ಚಿತ್ರಗಳೆಲ್ಲಾ ಸೂಪರ್ ಹಿಟ್. ಅಕ್ಷಯ್ ಸಿನಿಮಾ ಮಾಡ್ತಿದ್ದಾರೆ ಎಂದರೆ ಏನೋ ಹೊಸ ಕಥೆ, ಡಿಫರೆಂಟಾಗಿ ಇರುತ್ತೆ ಅನ್ನೋವಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿರುವ ನಟ. 

ಇವರ ಮಿಷನ್ ಮಂಗಲ್ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಚಿತ್ರವನ್ನೂ ನೋಡಲೇಬೇಕು ಎಂದು ತುದುಗಾಲಲ್ಲಿ ನಿಲ್ಲುವಂತೆ ಮಾಡಿದೆ. 

ಏತನ್ಮಧ್ಯೆ ಬಚ್ಚನ್ ಪಾಂಡೆ ಎನ್ನುವ ಸಿನಿಮಾವೊಂದನ್ನು ಮಾಡಲಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ಕನ್ನು ರಿಲೀಸ್ ಮಾಡಿದ್ದಾರೆ. ಫರ್ಹಾದ್ ಸಂಜಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ವರ್ಷ ಕ್ರಿಸ್ ಮಸ್, 2020 ಕ್ರಿಸ್ ಮಸ್ ಗೆ ಬಚ್ಚನ್ ಪಾಂಡೆ ತೆರೆಗೆ ಬರಲಿದೆ.