ಕಾಫಿ ವಿತ್ ಕರಣ್ ನಲ್ಲಿ ಕ್ವಶನ್ ಆಫ್ ದಿ ಸೀಸನ್ ಗೆ ಉತ್ತರಿಸಿ ಅಜಯ್ ದೇವಗನ್ ಆಡಿ ಕಾರು ಗೆದ್ದಿದ್ದಾರೆ.

ಮುಂಬೈ : ಕಾಫಿ ವಿತ್ ಕರಣ್ ಶೋ ನ 6 ಸೀಸನ್ ನ ಆನ್ಸರ್ ದ ಕ್ವಶನ್ ನಲ್ಲಿ ಪಾಲಗೊಂಡ ನಟ ಅಜಯ್ ದೆವಗನ್ ಆಡಿ ಎ 5 ಕಾರನ್ನು ಗೆದ್ದಿದ್ದಾರೆ. 

ನಟ ಅಮಿರ್ ಖಾನ್ ಅವರನ್ನು ಹಿಂದಿಕ್ಕಿದ ಅಜಯ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಪತ್ನಿ ಹಾಗೂ ನಟಿ ಕಾಜಲ್ ಅಗರ್ವಾಲ್ ಜೊತೆಗೆ ಶೋನಲ್ಲಿ ಪಾಲ್ಗೊಂಡಿದ್ದು ರ್ಯಾಪಿಡ್ ಫೈರ್ ವೇಳೆ ನೀವು ನಂಬುವ ಒಂದು ಮೂಢ ನಂಬಿಕೆ ಯಾವುದು ಎಂದು ಕೇಳಲಾಗಿತ್ತು. ಕಾಲ್ ಚಿತ್ರ ಮಾಡುವವರೆಗೂ ಕೆ ಅಕ್ಷರದಿಂದ ನಿರ್ಮಿಸಿದ ಚಿತ್ರಗಳು ಹಿಟ್ ಆಗುತ್ತವೆ ಎಂದು ನಂಬಿದ್ದೆ ಎಂದರು. 

View post on Instagram

ಅಜಯ್ ಉತ್ತರಕ್ಕೆ ಕಾಜಲ್ ಕೂಡ ನಗುವಿಂದಲೇ ಪ್ರತಿಕ್ರಿಯೆ ನೀಡಿದ್ದು, 2005ರಲ್ಲಿ ಕರಣ್ ಜೋಹಾರ್ ನಿರ್ಮಿಸಿದ ಕಾಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ತನ್ನ ಛಾಪು ಮೂಡಿಸುವಲ್ಲಿ ಸೋತಿತ್ತು.

ಇದೀಗ ಬಾಲಿವುಡ್, ಕ್ರೆಕೆಟ್ ಸೇರಿದಂತೆ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಈ ಶೋ ನ ಆನ್ಸರ್ ದ ಕ್ವಶನ್ ಸೀಸನ್ ವಿನ್ನರ್ ಅಜಯ್ ಆಗಿದ್ದಾರೆ.