ಬಾಲಿವುಡ್ ನಟ ಅಜಯ್ ದೇವಗನ್ ಆಗಾಗ ಕಾಮಿಡಿಯನ್ನ ಸಕತ್ತಾಗಿಯೇ ಮಾಡುತ್ತಾರೆ. ಸಿನಿಮಾ ಸೆಟ್ ನಲ್ಲಿ ಸಹ ನಟರನ್ನು ಆಗಾಗ ಕಾಲೆಳೆಯುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಅಜಯ್ ಹಾಗೂ ಟಬು ದೇ ದೇ ಪ್ಯಾರ್ ದೇ ಎನ್ನುವ ಸಿನಿಮಾ ಮಾಡುತ್ತಾರೆ. ಇವರಿಬ್ಬರ ಜೋಡಿ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. 

ಅಜಯ್ ತಮಾಷೆಯಾಗಿ ಟಬು ಕಾಲೆಳೆದಿದ್ದಾರೆ. 1994 ರಲ್ಲಿ ತೆರೆ ಕಂಡ ಚಿತ್ರ ವಿಜಯ್ ಪಥ್ ಸಿನಿಮಾದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಅಜಯ್ ಬಾಯಿ ತೆರೆದು ನಿದ್ದೆ ಮಾಡುತ್ತಿದ್ದಾರೆ. ಪಕ್ಕದಲ್ಲಿ ಟಬು ಬೇಜಾರಾಗಿ ಕುಳಿತಿದ್ದಾರೆ. ಅದಕ್ಕೆ ‘ ನಾನ್ಯಾಕೆ ನಿದ್ದೆ ಹೋದೆ ಎಂಬುದು ಇನ್ನೂ ಒಗಟಾಗಿಯೇ ಇದೆ‘ ಎಂದು ಬರೆದುಕೊಂಡಿದ್ದಾರೆ. 

 

ವಿಜಯ್ ಪಥ್ ಸಿನಿಮಾದ ಆಯಿಯೇ ಆಪ್ಕ ಇಂತಜಾರ್ ಥ ಹಾಡಿನ ಶೂಟಿಂಗ್ ಸಮಯವಿದು. 

ಟಬು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಅಜಯ್ ಬಗ್ಗೆ ಮಾತನಾಡುತ್ತಾ, ನಾವಿಬ್ಬರೂ 25 ವರ್ಷಗಳಿಂದ ಸ್ನೇಹಿತರು. ನನ್ನ ಕಸಿನ್ ಸಮೀರ್ ಆರ್ಯ ಹಾಗೂ ಅಜಯ್ ಒಳ್ಳೆಯ ಸ್ನೇಹಿತರು. ಇಬ್ಬರೂ ಸೇರಿ ನನ್ನನ್ನು ಬೇಹುಗಾರಿಕೆ ಮಾಡ್ತಾ ಇದ್ರು. ಯಾರದರೂ ಹುಡುಗರು ನನ್ನ ಹಿಂದೆ ಬಿದ್ದಿದಾರಾ, ಮಾತಾಡ್ತಾರಾ ಎಂದು ಗಮನಿಸುತ್ತಿದ್ದರು. ಅಂತವರಿಗೆ ಏಟು ಕೊಡುತ್ತಿದ್ದರು. ನಾನು ಇವತ್ತು ಸಿಂಗಲ್ಲಾಗಿದೀನಿ ಅಂದ್ರೆ ಅದಕ್ಕೆ ಅಜಯ್ ಕಾರಣ‘ ಎಂದಿದ್ದಾರೆ.