ಕಾಜೋಲ್ ವಾಟ್ಸಾಪ್ ನಂಬರ್ ಟ್ವೀಟ್ ಮಾಡಿದ ಪತಿ ದೇವಗನ್! ಮನೆಯಲ್ಲಿ ಶುರುವಾಯ್ತು ಪತಿ-ಪತ್ನಿಯರ ಫೈಟಿಂಗ್ | ಅಜಯ್‌ಗೆ ಮನೆಗೆ ಬರಬೇಡ ಎಂದ ಕಾಜೋಲ್
ಮುಂಬೈ (ಸೆ. 25): ಬಾಲಿವುಡ್ ನಟ- ನಟಿಯರ ಜೊತೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಅದಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನು ಅವರ ಫೋನ್ ನಂಬರ್ ಸಿಕ್ಕರೆ ಯಾರಿಗೆ ತಾನೇ ಬೇಡ. ಆದರೆ, ನಟ ಅಜಯ್ ದೇವಗನ್ ತಮ್ಮ ಪತ್ನಿ ಕಾಜೋಲ್‌ರ ಫೋನ್ ನಂಬರ್ ಅನ್ನು ಟ್ವೀಟರ್‌ನಲ್ಲಿ ಹಂಚಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
‘ ಕಾಜೋಲ್ ಈಗ ದೇಶದಲ್ಲಿ ಇಲ್ಲ. ಅವರ ವಾಟ್ಸಪ್ ನಂಬರ್ ನೀಡುತ್ತೇನೆ ಸಹಕರಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಹಾಗಂತ ಅಜಯ್ ದೇವಗನ್ ಅವರ ಟ್ವಿಟರ್ ಖಾತೆ ಹ್ಯಾಕ್ ಆಗಿಲ್ಲ. ಅಜಯ್ ದೇವಗನ್ ಟ್ವೀಟ್ ಮಾಡಿದ್ದೇ ತಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಶುರುವಾಯ್ತು. ಕೂಡಲೇ ಅಜಯ್ ಇನ್ನೊಂದು ಟ್ವೀಟ್ ಮಾಡಿದ್ರು.
'ಸಿನಿಮಾ ಸೆಟ್ ನಲ್ಲಿ ಕೆಲವು ತಮಾಷೆಗಳು ನಡೆಯುತ್ತಿರುತ್ತದೆ. ಸುಮ್ಮನೆ ಕಾಲೆಳೆಯಲು ಹೀಗೆ ಮಾಡಿದೆ' ಎಂದು ಪತ್ನಿ ಕಾಜೋಲ್ ಗೆ ಟ್ಯಾಗ್ ಮಾಡಿದರು.
ಇದಕ್ಕೆ ಕಾಜೋಲ್ ಪ್ರತಿಕ್ರಿಯೆ ನೀಡಿದ್ರು.
'ನಿಮ್ಮ ತಮಾಷೆಗಳು ಸೆಟ್ ನಿಂದ ಹೊರಗೆ ಕೂಡಾ ಜಾಸ್ತಿಯಾಗಿದೆ. ಅದಕ್ಕೆಲ್ಲಾ ನಮ್ಮ ಮನೆಯಲ್ಲಿ ಅವಕಾಶವಿಲ್ಲ' ಎಂದು ಪತಿಯ ಮೇಲೆ ಗರಂ ಆಗಿದ್ದಾರೆ.
ಕಾಜೋಲ್ ಸದ್ಯ ಹೆಲಿಕಾಪ್ಟರ್ ಈಲಾ ಎಂಬ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಕಾಜೋಲ್ ಮನೆಯಲ್ಲಿ ಡಿಶುಂ ಡಿಶುಂ ಶುರುವಾಗಿದೆ.
