ಬಾಲಿವುಡ್ ಸೆಲಬ್ರಿಟಿಗಳಾದ ಐಶ್ವರ್ಯಾ ರೈ, ಅಮಿತಾಬಚ್ಚನ್, ರಣಬೀರ್ ಕಪೂರ್ ಹಾಗೂ ಅಮೀರ್ ಖಾನ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಹಾಡಿನ ಮೂಲಕ ನಮನ ಸಲ್ಲಿಸಲು ಮುಂದಾಗಿದ್ದಾರೆ. 

ಪುಲ್ವಾಮಾ ದಾಳಿಯಲ್ಲಿ ಮಡಿದ ಹುತಾತ್ಮ ಯೋಧರ ಹಾಡಿನ ಮೂಲಕ ನಮನ ಸಲ್ಲಿಸಲು ಹಾಡೊಂದನ್ನು ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ 14 ಮಂದಿ ಸ್ಟಾರ್ ಗಳಿದ್ದಾರೆ.  ಈ ವಿಡಿಯೋಗೆ ’ತೂ ದೇಶ್ ಮೇರಾ’ ಎಂದು ಹೆಸರಿಡಲಾಗಿದೆ. ಅಭಿಷೇಕ್ ಮಿಶ್ರಾರವರ ಹ್ಯಾಪಿ ಪ್ರೊಡಕ್ಷನ್ ಅಡಿಯಲ್ಲಿ ಈ ವಿಡಿಯೋವನ್ನು ತಯಾರಿಸಲಾಗಿದೆ. 

ಸಿಆರ್ ಪಿಎಫ್ ಟ್ವಿಟರ್ ಹ್ಯಾಂಡಲ್ ನಲ್ಲಿ ಇದನ್ನು ಶೇರ್ ಮಾಡಿದ್ದು, ಪುಲ್ವಾಮಾ ದಾಳಿಯಲ್ಲಿ ಮಡಿದ ಹುತಾತ್ಮರಿಗಾಗಿ ಅಮಿತಾಬಚ್ಚನ್, ಅಮೀರ್ ಖಾನ್, ರಣಬೀರ್ ಕಪೂರ್, ಐಶ್ವರ್ಯಾ ರೈ ನಮನ ಗೀತೆಯನ್ನು ಅರ್ಪಿಸಿದ್ದಾರೆ. ಹುತಾತ್ಮರಿಗೆ ಗೌರವ ನೀಡಿದ ನಿಮ್ಮಗೆಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.