ಬಾಲಿವುಡ್ ಸೆಲೆಬ್ರಿಟಿ ಕಪಲ್’ಗಳಾದ ಅಭಿಶೇಕ್- ಐಶ್ವರ್ಯ ರೈ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಇವರಿಬ್ಬರ ಕೆಮಿಸ್ಟ್ರಿ ಎಲ್ಲರನ್ನು ಆಕರ್ಷಿಸುತ್ತದೆ. ಈ ಬಾರಿ ಇವರಿಬ್ಬರು ಸುದ್ದಿಯಾಗಿರೋದು ಅಡುಗೆ ವಿಚಾರದಲ್ಲಿ. ಅರೇ ಇದೆನಿದು ಎಂದು ಅಚ್ಚರಿಪಡಬೇಡಿ. ಹೌದು, ಅಭಿಶೇಕ್ ಬಚ್ಚನ್ ಪತ್ನಿಯ ಅಡುಗೆಯ ಬಗ್ಗೆ  ಟ್ವಿಟರ್’ನಲ್ಲಿ ಕಾಲೆಳೆದಿದ್ದಾರೆ.  

ಇತ್ತೀಚಿಗೆ ಐಶ್ವರ್ಯ ರೈ ಪತಿ ಮಹಾಶಯರಿಗೋಸ್ಕರ ಬ್ರಕೋಲಿ ಸಲಾಡ್ ಮಾಡಿ ಬಡಿಸಿದ್ದರು. ಇದು ಕೋಸಿನಿಂದ ತಯಾರಿಸಿದ ಅಡುಗೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಮಾಡಿದರೆ ಅಭಿಶೇಕ್’ಗೆ ಹಿಡಿಸಲೇ ಇಲ್ಲ. ಅದನ್ನು ಫೋಟೋ ಸಮೇತ ಅಭಿಶೇಕ್ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದರು. 

 

ಈ ಬಾರಿ ಹಾಗಾಗಬಾರದೆಂದು ಐಶ್ವರ್ಯ ನವಣೆಯಿಂದ ಹೊಸ ಸ್ಪೆಷಲ್ ಅಡುಗೆ  ಮಾಡಿದ್ದಾರೆ. ಇದಕ್ಕೆ ಕೋಸು, ಟೊಮೋಟೋ ಹಾಕಿ ಸರ್ವ್ ಮಾಡಿದ್ದಾರೆ. ಇದಕ್ಕೂ ಅಭಿಶೇಕ್ ಪತ್ನಿಗೆ ಕಾಲೆಳೆದಿದ್ದಾರೆ. ನನ್ನ ಹಿಂದಿನ ಟ್ವೀಟನ್ನು ನೋಡಿ ಐಶ್ವರ್ಯ ಈ ರೀತಿ ಅಡುಗೆ ಮಾಡಿದ್ದಾಳೆ ಎಂದು ತಮಾಷೆ ಮಾಡಿದ್ದಾರೆ.