ಐಶ್ವರ್ಯಾ, ಅಭಿಷೇಕ್‌ರಿಂದ ಗುಡ್‌ನ್ಯೂಸ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 1, Aug 2018, 5:14 PM IST
Aishwarya Rai And Abhishek Bachchan  come together for Gulab Jamun movie
Highlights

‘ಗುಲಾಬ್ ಜಾಮೂನ್’ ಚಿತ್ರದ ಸ್ಕ್ರಿಪ್ಟ್ ಚೆನ್ನಾಗಿದ್ದರಿಂದ ನಾನೇ ಅಭಿಷೇಕ್ ನನ್ನು ಒಪ್ಪಿಸಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ’ ಎಂದು  ಐಶ್ವರ್ಯಾ ಹೇಳಿದ್ದಾರೆ. 

ಮುಂಬೈ (ಆ. 01): ಸ್ಕ್ರಿಪ್ಟ್ ಇಂಟರೆಸ್ಟಿಂಗ್ ಆಗಿದ್ದರೆ, ನಿಜ ಜೀವನದ ಸಂಗಾತಿಗಳು ಸಿನಿಮಾದಲ್ಲಿ ಸಂಗಾತಿಗಳಾಗಿ ಕಾಣಿಸಿಕೊಳ್ಳುತ್ತಾರೆ’ ಎಂದು ಐಶ್ವರ್ಯ ರೈ ಬಚ್ಚನ್ ಹೇಳಿ ಬರೋಬ್ಬರಿ ಎಂಟು ವರ್ಷಗಳ ನಂತರ ಪತಿ ಅಭಿಷೇಕ್ ಬಚ್ಚನ್ ಜೊತೆಗೆ ‘ಗುಲಾಬ್ ಜಾಮೂನ್’ ಮೂಲಕ ಜೊತೆಯಾಗುತ್ತಿರುವ ಸುದ್ದಿಯನ್ನು ಪಕ್ಕಾ ಮಾಡಿದ್ದಾರೆ.

2007 ರಲ್ಲಿ ಒಟ್ಟಿಗೆ ಸಪ್ತಪದಿ ತುಳಿದ ಅಭಿಷೇಕ್-ಐಶ್ವರ್ಯ 2010 ರಲ್ಲಿ ‘ರಾವಣ್’ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ ಎಂಟು ವರ್ಷಗಳಿಂದ ಈ ಜೋಡಿ ಒಟ್ಟಿಗೆ ತೆರೆಯ ಮೇಲೆ ಕಾಣಿಸಿಕೊಂಡಿರಲೇ ಇಲ್ಲ. ಇದಕ್ಕೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕದಿದ್ದದ್ದೇ ಕಾರಣ ಎಂದು ಐಶ್ವರ್ಯ ರೈ ಹೇಳಿಕೊಂಡಿದ್ದಾರೆ. ಅದೇನೇ ಇದ್ದರೂ ಈಗ ‘ಕುಚ್ ನಾ ಕಹೋ’, ‘ಧೂಮ್ 2’, ‘ಗುರು’, ‘ರಾವಣ್’ ಚಿತ್ರಗಳ ನಂತರ ಸರ್ವೇಶ್ ಮೇವಾರ ನಿರ್ದೇಶನದಲ್ಲಿ ‘ಗುಲಾಬ್ ಜಾಮೂನ್’ ಚಿತ್ರಕ್ಕೆ ಒಂದಾಗಲು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ.

ಅಲ್ಲದೇ ಚಿತ್ರದ ಸ್ಕ್ರಿಪ್ಟ್ ಚೆನ್ನಾಗಿದ್ದರಿಂದ ನಾನೇ ಅಭಿಷೇಕ್‌ನನ್ನು ಒಪ್ಪಿಸಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ ಎಂದೂ ಐಶ್ವರ್ಯ ಹೇಳಿಕೊಂಡಿರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದಕ್ಕಿಂತಲೂ ಹೆಚ್ಚಾಗಿ ಎಂಟು ವರ್ಷಗಳ ಬಳಿಕ ಒಂದಾಗುತ್ತಿರುವ ಈ ನಿಜ ಜೀವನದ ಜೋಡಿಯನ್ನು ತೆರೆಯ ಮೇಲೆ ಎದುರಾಗಲು ಒಂದಷ್ಟು ಸಮಯ ತಾಳ್ಮೆಯಿಂದ ಕಾಯಲೇಬೇಕು. 

loader