ಐಂದ್ರಿತಾ-ದಿಗಂತ್ ಪ್ರಾಣಿ ಪಕ್ಷಿ ಸೇವೆ ಮಾಡುತ್ತಿದ್ದಾರೆ

Aindrita Ray And Diganth Social Service
Highlights

ಐಂದ್ರಿತಾ ರೇ ಎಲ್ಲರಂತೆ ಅಲ್ಲ. ಐಂದ್ರಿತಾ ರೇ ಇತ್ತೀಚೆಗೆ ಗಾಯಗೊಂಡ ಬೀದಿ  ನಾಯಿಯೊಂದನ್ನು ರಕ್ಷಿಸಿ ಪೋಷಿಸಿದ್ದರು. ಅನಂತರ ಎಲ್ಲರಲ್ಲೂ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳು ಎಂದು ವಿನಂತಿಸಿದ್ದರು ಕೂಡ. ಇಂಥಾ ಐಂದ್ರಿತಾ ಈಗ ಮತ್ತೆ ಒಂದು  ಹೆಜ್ಜೆ ಮುಂದಿಟ್ಟಿದ್ದಾರೆ.

ಬೆಂಗಳೂರು (ಮಾ. 29): ಐಂದ್ರಿತಾ ರೇ ಎಲ್ಲರಂತೆ ಅಲ್ಲ. ಐಂದ್ರಿತಾ ರೇ ಇತ್ತೀಚೆಗೆ ಗಾಯಗೊಂಡ ಬೀದಿ  ನಾಯಿಯೊಂದನ್ನು ರಕ್ಷಿಸಿ ಪೋಷಿಸಿದ್ದರು. ಅನಂತರ ಎಲ್ಲರಲ್ಲೂ ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳು ಎಂದು ವಿನಂತಿಸಿದ್ದರು ಕೂಡ. ಇಂಥಾ ಐಂದ್ರಿತಾ ಈಗ ಮತ್ತೆ ಒಂದು  ಹೆಜ್ಜೆ ಮುಂದಿಟ್ಟಿದ್ದಾರೆ.
ಬೇಸಿಗೆಯಲ್ಲಿ ಮನುಷ್ಯರೇ ನೀರು ಸಿಗದಿದ್ದರೆ ತತ್ತರಿಸಿ ಹೋಗುತ್ತಾರೆ. ಅಂಥದ್ದರಲ್ಲಿ  ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಎಲ್ಲಿಗೆ ಹೋಗಬೇಕು? ಅದಕ್ಕಾಗಿ ಐಂದ್ರಿತಾ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಪ್ರಾಣಿ, ಪಕ್ಷಿಗಳಿಗಾಗಿ ನೀರಿನ ತೊಟ್ಟಿ ಇಡಲು  ಆಲೋಚಿಸಿದ್ದಾರೆ. ಅದಕ್ಕಾಗಿ ತೊಟ್ಟಿಗಳನ್ನು ರೆಡಿ ಮಾಡಿದ್ದಾರೆ.
ಐಂದ್ರಿತಾರ ಈ ಒಳ್ಳೆಯ ಕೆಲಸಕ್ಕೆ ದಿಗಂತ್ ಸೇರಿದಂತೆ  ಸುಮಾರು ಮಂದಿ ಸಮಾನ ಮನಸ್ಕರು ಕೈ  ಜೋಡಿಸಿದ್ದಾರೆ. ರಣ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳು ನೋಯದಿರಲು ಈ ಮೂಲಕ ಒಳ್ಳೆಯ ಸಂದೇಶವನ್ನು ರವಾನಿಸಿದ್ದಾರೆ. ಯಾವುದಾದರೂ ಬೀದಿಯಲ್ಲಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಒದ್ದಾಡುವುದು ಕಂಡರೆ ಸಾಕು ವಾಲಂಟಿಯರ್‌ಗಳಿಗೆ  ದೂರವಾಣಿ ಕರೆ ಮಾಡಬಹುದು. ಅವರು ನೀರಿನ ತೊಟ್ಟಿಯನ್ನು ಉಚಿತವಾಗಿ ನೀಡುತ್ತಾರೆ. ಅದನ್ನು ತಂದು ಬೀದಿಯಲ್ಲಿ  ನೀರು ತುಂಬಿಸಿಟ್ಟರೆ ಸಾಕು.
ಈ ಒಳ್ಳೆಯ ಕೆಲಸಕ್ಕೆ  ಐಂದ್ರಿತಾರಿಗೆ ನಮ್ಮ ಕಡೆಯಿಂದ ಒಂದು ಥ್ಯಾಂಕ್ಸ್ ಹೇಳೋಣ ಅಲ್ಲವೇ? 

loader